ರಾಯಚೂರು :- ನಗರದ ಎನ್ ಐ ಜಿ ಕಾಲೋನಿಯ ಉದ್ಯಾನವನ ಹಾಗೂ ಕಾಶಿ ವಿಶ್ವನಾಥ ದೇವಸ್ಥಾನದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ನಗರಸಭೆ ಸದಸ್ಯ ಜಯಣ್ಣ ಅವರು ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಿದರು.
ಗುರುವಾರದಂದು ಬೆಳಿಗ್ಗೆ ಎನ್ ಐ ಜಿ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಡಿಗಲ್ಲು ಸಮಾರಂಭದಲ್ಲಿ ಪಾಲ್ಗೊಂಡ ನಗರಸಭೆ ಸದಸ್ಯ ಜಯಣ್ಣ ಅವರು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡು ನಂತರ ಕಾಂಪೌಂಡ್ ಕಾಮಗಾರಿಗೆ ಅಡಿಗಲ್ಲು ಹಾಕಿ ಮಾತನಾಡಿದ ಜಯಣ್ಣ ಕಾಲೋನಿಯ ಅಭಿವೃದ್ಧಿಗೆ ನಿವಾಸಿಗಳ ಸಹಕಾರ ಅತ್ಯಗತ್ಯ ವಾಗಿರುತ್ತದೆ. ಎನ್ ಐ ಜಿ ಕಾಲೋನಿಯ ಮಹಿಳೆಯರು ಹಾಗೂ ದಾನಿಗಳು ಸೇರಿಕೊಂಡು ಇಂದು ಉದ್ಯಾನವನ ಹಾಗೂ ದೇವಸ್ಥಾನದ ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದು ಸಂತಸದ ಕೆಲಸವಾಗಿದೆ ಎಂದರು.
ಇನ್ನೂ ಉದ್ಯಾನವನದಲ್ಲಿ ಹಲವು ವೈವಿಧ್ಯಮಯ ಗಿಡ ಮರಗಳನ್ನು ಬೆಳಸುವ ಮೂಲಕ ಪರಿಸರ ಉಳಿಸುವ ಕೆಲಸವನ್ನು ಮಾಡಬೇಕು. ಉದ್ಯಾನವನದ ಅಭಿವೃದ್ಧಿಗೆ ನಗರಸಭೆ ಮತ್ತು ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದು ಜಯಣ್ಣ ತಿಳಿಸಿದರು.
ಈ ಹಿಂದೆ ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದಾಗ, ನಗರಸಭೆ ವತಿಯಿಂದ ನಲ್ಲಿಗಳನ್ನು ಅಳವಡಿಸುವ ಮೂಲಕ ನೀರಿನ ಸಮಸ್ಯೆ ಪರಿಹರಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಎನ್ ಐ ಜಿ ಕಾಲೋನಿಯಲ್ಲಿ ಒಳಚರಂಡಿ ವ್ಯವಸ್ಥೆ, ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೋನಿಯ ನಿವಾಸಿಗಳಾದ ಕೃಷಿ ವಿಶ್ವವಿದ್ಯಾಲಯದ ಪ್ರಾಚಾರ್ಯರಾದ ಸುಧಾಕರ, ಸಾಯಿ ಪ್ರಿಯ ಕಾಲೋನಿಯ ಅಧ್ಯಕ್ಷ ಸತೀಶ್ ಹಿರೇಮಠ, ಹೂಗಾರ ಸಮಾಜದ ರಾಯಚೂರು ತಾಲ್ಲೂಕು ಅಧ್ಯಕ್ಷ ಶಶಿಧರ ಹೂಗಾರ, ರಾಘವೇಂದ್ರ ಕುಲಕರ್ಣಿ, ಅಶೋಕ, ವಿಶಾಲಾಕ್ಷಿ, ಗಿರಿಜಾ ದೇವಿ ಎನ್, ಶ್ರೀದೇವಿ, ಶಿವಲೀಲಾ, ಗೀತಾ, ಮಂಜುಳಾ, ರೇಣುಕಾ, ಶಂಕ್ರಮ್ಮ, ಬಸ್ಸಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.