2024 ನೇ ವರ್ಷದ ಜಾರ್ಖಂಡ್ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ

  • krishna s
  • 15 Oct 2024 , 10:49 AM
  • Delhi
  • 483

ಜಾರ್ಖಂಡ್ ರಾಜ್ಯ ವಿಧಾನಸಭಾ ಚುನಾವಣೆ 2024, ಎರಡು ಹಂತಗಳಲ್ಲಿ ನಡೆಯಲಿದೆ.ಮೊದಲ ಹಂತದ ಮತದಾನ ನವೆಂಬರ್ 13 ರಂದು ಮತ್ತು ಎರಡನೇ ಹಂತದ ಮತದಾನ ನವೆಂಬರ್ 20 ರಂದು ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23 ರಂದು ನಡೆಯಲಿದ್ದು, ಅಂತಿಮ ಫಲಿತಾಂಶ ಪ್ರಕಟವಾಗಲಿದೆ.

ಚುನಾವಣೆ ಪ್ರಮುಖ ದಿನಾಂಕಗಳು:

ಅಧಿಸೂಚನೆಯ ಬಿಡುಗಡೆ: ಅಕ್ಟೋಬರ್ 18, 2024 (ಶುಕ್ರವಾರ)

ನಾಮಪತ್ರ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 22, 2024 (ಮಂಗಳವಾರ)

ನಾಮಪತ್ರ ಪರಿಶೀಲನೆ ದಿನ: ಅಕ್ಟೋಬರ್ 25, 2024 (ಶುಕ್ರವಾರ)

ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಅಕ್ಟೋಬರ್ 29, 2024 (ಮಂಗಳವಾರ)

ಮತದಾನ ದಿನಾಂಕಗಳು:

ಮೊದಲ ಹಂತ: ನವೆಂಬರ್ 13, 2024 (ಬುಧವಾರ)

ಎರಡನೇ ಹಂತ: ನವೆಂಬರ್ 20, 2024 (ಬುಧವಾರ)

ಮತ ಎಣಿಕೆ ದಿನ: ನವೆಂಬರ್ 23, 2024 (ಶನಿವಾರ)

ಚುನಾವಣೆ ಪೂರ್ಣಗೊಳ್ಳಬೇಕಾದ ಕೊನೆಯ ದಿನ: ನವೆಂಬರ್ 25, 2024 (ಸೋಮವಾರ)

Read All News