ನಾಳೆ ಕುಮಾರ ಗಂಧರ್ವದಲ್ಲಿ ಉದ್ಯೋಗ ಮೇಳ: ಹೆಗಡೆ

  • Shivaraj Bandigi
  • 15 Jan 2024 , 2:34 AM
  • Belagavi
  • 623

ಬೆಳಗಾವಿ : ಇಲ್ಲಿನ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನ.16 ರಂದು ಬೆಳಗ್ಗೆ 9.30 ರಿಂದ ಸಂಜೆ 5ಗಂಟೆಯವರೆಗೆ ವಿಶೇಷಚೇತನರ ಸೌರ ಸ್ವ ಉದ್ಯೋಗ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸೆಲ್ಕೋ ಸಂಸ್ಥೆಯ ವಿನಾಯಕ ಹೆಗಡೆ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಲ್ಕೋ ಸಂಸ್ಥೆ ಕಳೆದ 13 ವರ್ಷಗಳಿಂದ ದೇಶದಾದ್ಯಂತ ಕೆಲಸ ಮಾಡುತ್ತಿದೆ. ನಿರುದ್ಯೋಗಿ ಯುವಕರಿಗೆ ಕೆಲಸ ಕೊಡಿಸುವುದು, ಸಾಮಾಜಿಕ ಸೇವೆ ಮಾಡುತ್ತ ಬಂದಿದೆ. ವಿಶೇಷ ಚೇತನರಿಗೆ ಸೌರ ವಿದ್ಯುತ್ ಮೂಲಕ ಜೀವನೋಪಾಯ ವ್ಯವಸ್ಥೆಗಳನ್ನು ಕಲ್ಪಿಸುವ ಕೆಲಸ ಮಾಡಿದೆ ಎಂದರು.

ಗುರುವಾರ ನ.16 ರಂದು ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಯೋಜಿಸಲಾದ ಈ ಉದ್ಯೋಗ ಮೇಳವನ್ನು ಬೆಳಗಾವಿ ಜಿಲ್ಲಾ ಪಂಚಾಯತ ಸಿಇಒ ಹರ್ಷಲ್ ಬೋಯರ್ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಎರಡೂ ಉಪನ್ಯಾಸವನ್ನು ಆಯೋಜಿಸಲಾಗಿದೆ ಎಂದರು.
ಈಗಾಗಲೇ ಸಾಕಷ್ಟು ವಿಶೇಷಚೇತನರಿಗೆ ಸ್ವಾವಲಂಬಿ ಜೀವನ ನಡೆಸಲು ಸೆಲ್ಕೋ ಸಂಸ್ಥೆ ನೆರವಾಗಿದೆ. ಗುರುವಾರ ನಡೆಯುವ ಉದ್ಯೋಗ‌ ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿ ಶುಲ್ಕ ಇಲ್ಲ. ಸಂಪೂರ್ಣ ಉಚಿತವಾಗಿದ್ದು ಇದರ ಲಾಭ ಪಡೆಯಬೇಕು ಎಂದು ತಿಳಿಸಿದರು.

ಪ್ರಕಾಶ ಮೇಟಿ, ವೀರೇಶ ತಡಹಾಳ ಉಪಸ್ಥಿತರಿದ್ದರು.

Read All News