ಪತ್ರಕರ್ತ ದೀಪಕ್ ತಿಮ್ಮಯ ಕಾಂಗ್ರೆಸ್ ಸೇರ್ಪಡೆ

  • shivaraj bandigi
  • 11 Apr 2024 , 1:52 PM
  • Belagavi
  • 761

ಬೆಂಗಳೂರು: ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಡಿಸಿಎಂ ಡಿ ಕೆ ಶಿವಕುಮಾರ್ ಅವರ ಬೆಂಗಳೂರಿನಲ್ಲಿರುವ ಸದಾಶಿವನಗರ ನಿವಾಸದಲ್ಲಿ ಸೇರ್ಪಡೆ ಆದರು. ರಂಜಾನ್ ಹಬ್ಬದ ಶುಭಾಶಯ ಕೋರಿದ ಡಿಕೆ ಶಿವಕುಮಾರ್, ಹೊಸದಡಕು, ಯುಗಾದಿ ಆಗಿದೆ. ಇವತ್ತು ಒಳ್ಳೆಯ ಮುಹೂರ್ತ ಹುಡುಕಿದ್ದೇನೆ. ದೀಪಕ್ ತಿಮ್ಮಯ್ಯ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡೆ. ಒಳ್ಳೆಯ ಸಂದರ್ಭದಲ್ಲಿ ಒಳ್ಳೆ ಸಲಹೆಗಳನ್ನು ನೀಡಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಯಾರ ಯಾರ ಹಣೆಬರಹ ಏನೇನಿದೆಯೋ ಗೊತ್ತಿಲ್ಲ ಎಂದರು.

Read All News