ಬಿಜೆಪಿ ಪಕ್ಷವನ್ನು ಪ್ರಚಂಡ ಬಹುಮತದಿಂದ ಆರಸಿ ತರಲು ಆಗ್ರಹಿಸಿದ ಕೆ.ಡಿ.ದೇಶಪಾಂಡೆ

  • 30 Dec 2023 , 10:35 AM
  • Belagavi
  • 212

ಬೆಳಗಾವಿ : ಕೆ.ಡಿ.ದೇಶಪಾಂಡೆಯವರು ಪ್ರಧಾನಿ ಮೋದಿ ಮತ್ತು ಕರ್ನಾಟಕ ಸಿ ಎಂ ಬೊಮ್ಮಾಯಿಯವರ ಕಾರ್ಯ ವೈಖರಿಯನ್ನು ಹೊಗಳಿದ್ದಾರೆ.

 Hd ಕುಮಾರಸ್ವಾಮಿ ವಿರುದ್ದ ಹರಿಹಾಯ್ದ ಕೆ.ಡಿ.ದೇಶಪಾಂಡೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದಂತೆ ಒತ್ತಾಯಿಸಿದ್ದಾರೆ ಮತ್ತು ತಕ್ಷಣವೇ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರದಿಂದ ಪ್ರತಿ ಸಮುದಾಯವರಿಗೆ ಒಳಿತು ಆಗಿದೆ ಎಂದು ಹೇಳಿದ್ದಾರೆ.

ಕುರುಬ ಸಮಾಜದ ಹಿರಿಯರು ಕುರುಬ ಸಮಾಜದ ಟಗರು ಆದಂತ ನಮ್ಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಬಂದಂತೆ ಮಾತನಾಡುತ್ತಾರೆ. 

ರಾಜಕೀಯ ಅಂದರೆ ಮನಬಂದಂತೆ ಮಾತನಾಡುವುದಲ್ಲ ಮಾತನಾಡಿ ವೋಟ್ ಗಿಟ್ಟಿಸಿಕೊಳ್ಳುವುದಲ್ಲ ಎಂದು ಡಾಕ್ಟರ್ ಕೆ.ಡಿ ದೇಶಪಾಂಡೆ ಹೇಳಿದ್ದಾರೆ.

ಈ ಆಧುನಿಕ ದಿನಗಳಲ್ಲಿ ಎಸ್ಸಿಎಸ್‌ಟಿ ಕುರುಬ ಸಮಾಜಗಳು ತುಂಬಾ ಸುಧಾರಣೆಗೊಂಡಿವೆ ಎಂದು ಹೇಳಿದ ಡಾಕ್ಟರ್ ಕೆ. ಡಿ ದೇಶಪಾಂಡೆ ಹೇಳಿದ್ದಾರೆ.

ಸಿದ್ದರಾಮಯ್ಯನವರು ಆರ್ ಎಸ್ ಎಸ್ ಬಗ್ಗೆ ತುಂಬಾ ತುಚ್ಚವಾಗಿ ಮಾತನಾಡುತ್ತಾರೆ. 

ಆರ್ ಎಸ್ ಎಸ್ ಅಂದರೆ ಅದು ದೇವರ ಮನೆ ಎಂದು ಹೇಳಿದ ಡಾಕ್ಟರ್ ಕೆ.ಡಿ ದೇಶಪಾಂಡೆ,ಆರ್ ಎಸ್ ಎಸ್ ಅಂದರೆ ಯಾವುದೇ ಜಾತಿ ಧರ್ಮದ ಬಗ್ಗೆ ಭೇದವಿಲ್ಲ ಅದು ಎಲ್ಲರನ್ನೂ ರಕ್ಷಣೆ ಮಾಡುತ್ತದೆ ಹೀಗಾಗಿ ಸಿದ್ದರಾಮಯ್ಯನವರು ಇನ್ನು ಮುಂದೆ ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದರು. 

ಯಾವುದೇ ಪಕ್ಷದ ಮುಖಂಡರು ಯಾವುದೇ ಪಕ್ಷದ ನಾಯಕರು ಮಾತನಾಡುವಾಗ ಸಮಚಿತ್ತ ಮಾತನಾಡಿ ಮತ್ತು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಕೆಲಸ ಮಾಡಿದರೆ
ಭಾರತವು ಪ್ರಗತಿ ಪತದತ್ತ ಸಾಗುವುದು ಎಂದು ಡಾಕ್ಟರ್ ಕೆ.ಡಿ ದೇಶಪಾಂಡೆ ಹೇಳಿದರು. 

ಇದೇ ರೀತಿ ಡಿ.ಕೆ.ಶಿವಕುಮಾರ ವಿರುದ್ದ  ಹರಿಹಾಯ್ದ  ಡಾಕ್ಟರ್ ಕೆ.ಡಿ ದೇಶಪಾಂಡೆ ಇವತ್ತಿನ ದಿನಗಳಲ್ಲಿ ಡಿಎಡ್ ಕಾಲೇಜ್ ಬಂದ ಆಗಲು ನೇರವಾಗಿ ಡಿ.ಕೆ ಶಿವಕುಮಾರ್ ಕಾರಣ ಎಂದರು. 

ಡಾಕ್ಟರ್ ದೇಶಪಾಂಡೆ ಅವರು ಕೊನೆಯದಾಗಿ ಬಿಜೆಪಿ ಪರವಾಗಿ ಯಾವುದೇ ಜಾತಿ ಧರ್ಮ ಭೇದವಿಲ್ಲದೆ ಮತವನ್ನು ಬಿಜೆಪಿಗೆ ನೀಡಿ ಎಂದು ಮತಯಾಚಿಸಿದರು.
 

Read All News