ಬೆಳಗಾವಿ : ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಬೆಳಗಾವಿ ನಗರದ ವಾರ್ಡ ನಂ-4 ನರಗುಂದಕರ ಭಾವೆ ಚೌಕ್ ದತ್ತಾತ್ರೆಯ ಮಂದಿರ ಹತ್ತಿರ ಬೊರವೆಲ್ (ಕೊಳವೆ ಬಾವಿ) ಕೊರೆಯುವ ಕಾರ್ಯಕ್ಕೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಪೂಜೆ ಸಲ್ಲಿಸಿ ಗುರುವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷ ಅನೀಲ ಬೆನಕೆ, ನಗರ ಸೇವಕರಾದ ಜಯತೀರ್ಥ ಸವದತ್ತಿ, ರಾಜಶೇಖರ ಡೊಣಿ, ಬಾಬುಲಾಲ ಪುರೋಹಿತ ವಿಕ್ರಮ ಪುರೋಹಿತ, ಶಿಲ್ಪಾ ಕೆಕರೆ, ವಿಜಯ ಭದ್ರಾ, ಮಹಾನಗರ ಜಿಲ್ಲಾ ಮಾಧ್ಯಮ ಸಂಚಾಲಕ ಶರದ ಪಾಟೀಲ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.