ಗಂಗಾವತಿ :ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಸಂಸ್ಥಾಪಕ ಹಾಗು ರಾಜ್ಯಾಧ್ಯಕ್ಷ ಹಾಗೂ ಗಂಗಾವತಿಯ ಜನಪ್ರಿಯ ಶಾಸಕರಾದ ಜಿ, ಜನಾರ್ದನ್ ರೆಡ್ಡಿ ಅವರು ಪಕ್ಷವನ್ನು ಸ್ಥಾಪಿಸಿ ಇಂದಿಗೆ (25/12/23ಕ್ಕೆ) ಒಂದು ವರ್ಷವಾಯಿತು, ರೆಡ್ಡಿ ಆದೇಶದ ಮೇರೆಗೆ ವಾರ್ಷಿಕೋತ್ಸವ ಸಮಾರಂಭವನ್ನು ಅಂಜನಾದ್ರಿ ಯಲ್ಲಿ ಆಂಜನೇಯನ ಪಾದಗಳಿಗೆ ಪೂಜೆ ಮಾಡಿ ಕೇಕ್ ಅನ್ನು ಕತ್ತರಿಸಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮನೋಹರ್ ಗೌಡ ಅವರು ತಿಳಿಸಿದ್ದಾರೆ.
ಕಲ್ಯಾಣ್ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಅವರು ಗಂಗಾವತಿಯಲ್ಲಿ ಸ್ಪರ್ದಿಸಿ ನಮಗೊಂದು ಅವಕಾಶ ಮಾಡಿಕೊಟ್ಟಿದ್ದಾಗಿ ಧನ್ಯವಾದ ತಿಳಿಸಿದ್ದಾರೆ.
ಲೋಕಸಭಾ, ಸ್ಥಳೀಯ ಸಂಸ್ಥೆ ಚುನಾವಣೆಗಳು ಹಾಗೂ 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿಜಯ ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿದು ಜಿ ಜನಾರ್ದನ ರೆಡ್ಡಿ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲು ಸಂಕಲ್ಪ ಮಾಡಲಾಯಿತು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರು ಕೊಪ್ಪಳ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿಗಳು ಮನೋಹರ ಗೌಡ ಹೇರೂರು, ಕೊಪ್ಪಳ ಜಿಲ್ಲಾಧ್ಯಕ್ಷರಾದ ಸಂಗಮೇಶ್ ಬಾಗವಾಡಗಿ, ಮುಖಂಡರುಗಳಾದ ರಾಜೇಶ್ ರೆಡ್ಡಿ, ಚನ್ನವೀರನಗೌಡ ಕೋರಿ, ದುರುಗಪ್ಪ ಆಗೋಲಿ, ವೀರೇಶ್ ಬಲಕುಂದಿ, ಬೆಟ್ಟಪ್ಪ ಬೆಣಕಲ್, ಮಲ್ಲಿಕಾರ್ಜುನ ಸ್ವಾಮಿ ಆನೆಗುಂದಿ, ಮಂಜುಗೊಂದಿ, ಗಂಗಾಧರ, ಶರಣು ಓಜನಹಳ್ಳಿ ಮಹಿಳಾ ಮುಖಂಡರುಗಳಾದ ಗೀತಾ, ವಿಜಯಲಕ್ಷ್ಮಿ, ಸುಮಂಗಲಮ್ಮ ಇನ್ನಿತರರು ಭಾಗವಹಿಸಿದ್ದರು.