ಗಂಗಾವತಿ : ಕನಕಗಿರಿ ಕ್ಷೇತ್ರದ ಶಾಸಕ, ಶಿವರಾಜ್ ಎಸ್ ತಂಗಡಗಿ ಅವರಿಗೆ, ಸಚಿವ ಸ್ಥಾನವನ್ನು, ನೀಡಬೇಕೆಂದು, ಗಂಗಾವತಿ ತಾಲೂಕ, ಭೋವಿ ಸಮಾಜದ, ಅಧ್ಯಕ್ಷ, ಗಾಳೆಪ್ಪ ಬೋವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಹಾಗೂ ಎಐಸಿಸಿ, ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒತ್ತಾಯಿಸಿದರು, ಈ ಕುರಿತು ಬುಧವಾರದಂದು ಪತ್ರಿಕಾ ಭವನದಲ್ಲಿ, ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅಧ್ಯಕ್ಷ ಗಾಳೆಪ್ಪ ಅವರು ಶಾಸಕ, ಶಿವರಾಜ್ ಅಂಗಡಿಗಿ ಅವರು, ಈಗಾಗಲೇ ಸಚಿವರಾಗಿ, ಕನಕಗಿರಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ, ಮುಂದಾಗಿದ್ದು, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದು.
ಸರ್ವ ಸಮಾಜದವರ, ಒಳಿತನ್ನು ಬಯಸುವ ವ್ಯಕ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಹಾಗೂ, ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು,, ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಹಿನ್ನೆಲೆಯಲ್ಲಿ, ಸಚಿವ ಸಂಪುಟದ ಸಚಿವರನ್ನಾಗಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿಯಾಗಿ, ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು, ತಿಳಿಸಿದರು.
ರಾಜ್ಯದಂತ 45 ಲಕ್ಷ ಜನಸಂಖ್ಯೆ ಹೊಂದಿದ, ಬೋವಿ ಸಮಾಜ ಬಾಂಧವರು, ಕಾಂಗ್ರೆಸ್ ಪಕ್ಷದಲ್ಲಿ ಮೂರು ಬಿಜೆಪಿ ಪಕ್ಷದಿಂದ ನಾಲ್ಕು ಜನ, ಆಯ್ಕೆಗೊಂಡಿದ್ದಾರೆ .
ಕನಕಗಿರಿ ವಿಧಾನಸಭೆ ಸಭಾ ಕ್ಷೇತ್ರದಿಂದ, ಸುಮಾರು 26,000 ಅಧಿಕ ಮತಗಳ ಅಂತರದಿಂದ ಜಯಗಳಿಸಿದ, ತಂಗಡಿಗೆ ಅವರಿಗೆ, ಸಚಿವ ಸ್ಥಾನ ಕಲ್ಪಿಸಿ, ಐತಿಹಾಸಿಕ ಹಿನ್ನೆಲೆ ಹೊಂದಿದ, ಕನಕಗಿರಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಪ್ರವಾಸಿ ತಾಣ ನೆನೆಹೂದಿಗೆ ಬಿದ್ದಿರುವ ಹಲವು ಯೋಜನೆಗಳ ಅನುಷ್ಠಾನಕ್ಕಾಗಿ, ಅವಕಾಶ ಕಲ್ಪಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಾ ಅಧ್ಯಕ್ಷ, ಅಜ್ಜಪ್ಪ ಬೋವಿ, ತಿಮ್ಮಣ್ಣ ಬೋವಿ ಸೋಮಪ್ಪ ಬೋವಿ ದುರ್ಗಪ್ಪ ಬೋವಿ, ಹಳ್ಳಪ್ಪ ಬೋವಿ ಇತರರು ಸುದ್ದಿಗೋಷ್ಠಿಯಲ್ಲಿ, ಪಾಲ್ಗೊಂಡಿದ್ದರು,