ಬೆಳಗಾವಿ :SC ST ಅನುದಾನವನ್ನು ದುರ್ಬಳಕೆ ಮಾಡಿರುವ ಕುರಿತು ಮೂಲ ನಿವಾಸಿಯಾದ ಅಂಬೇಡ್ಕರಗಲ್ಲಿಗೆ ಅನುದಾನವನ್ನು ನೀಡದೆ ಬೇರೆ ವಾರ್ಡನಲ್ಲಿ ಅನುದಾನವನ್ನು ಬಳಸಿದ್ದಾರೆ ಅದರ ಕುರಿತು ತನಿಖೆ ಆಗಬೇಕು ಎಂದು ಹೇಳಿದ್ದಾರೆ.
ಶಂಕರ ಪಾಟೀಲ ಅವರಿಗೆ 2016-17 ನೇ ಸಾಲಿನಲ್ಲಿ ವ್ಯವಹಾರಿಕವಾಗಿ ಹಾಲಿನ ಡೈರಿ ಅಂತ ಲೈಸನ್ಸ್ ಕೊಟ್ಟಿದ್ದೀರಿ, ಆದರೆ ಅದು 200 ದನಗಳ ಕೊಟ್ಟಿಗೆಯಾಗಿದ್ದು ಇದು ಅಂಬೇಡ್ಕರಗಲ್ಲಿಯ ಜನರಿಗೆ ತೊಂದರೆಯಾಗುತ್ತಿದ್ದು ಹಾಗೂ 2016- 17ರಿಂದ 2022-23 ಇಲ್ಲಿಯವರೆಗೆ ಎಷ್ಟು ವರ್ಷ ಕರವಸೂಲಿ ಮಾಡಿದ್ದಾರೆ. ಅದರ ಕುರಿತು ಮಾಹಿತಿ ನೀಡಬೇಕು ಎಂದು ಕೋರಿದ್ದಾರೆ.
ಪಿ.ಡಿ.ಓ ಅವರು ಆಸ್ತಿ ಪುಸ್ತಕವನ್ನು ಪರಿಶಿಷ್ಟ ಜಾತಿಯ ಹುಡುಗಿಯ ಕಡೆಯಿಂದ ಮರಾಠಿ ಪುಸ್ತಕದಿಂದ ಕನ್ನಡ ಪುಸ್ತಕಕ್ಕೆ ಅನುದಾನವನ್ನು ಮಾಡಿಕೊಂಡಿದ್ದಾರೆ. ಆ ಹುಡುಗಿಗೆ ಕಛೇರಿಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳಿ ಅಂದರೆ ತೆಗೆದುಕೊಳ್ಳುತ್ತಿಲ್ಲ. ಇಲ್ಲಿ ಜಾತಿಯ ತಾರತಮ್ಯ ಆಗುತ್ತಿದೆ ಎಂದು ದೂರಿದ್ದಾರೆ.
ನೋಂದಣಿ ಕಂಪ್ಯೂಟರ್ ಉತಾರ, ಮನೆಕಟ್ಟಲು ಪರವಾನಿಗೆ ಅಂಗಡಿಲೈಸನ್ಸ್, ವ್ಯವಹಾರಿಕ ಲೈಸನ್ಸ್, ಆಸ್ತಿ ವರ್ಗಾವಣೆ ಇವೆಲ್ಲವುಗಳನ್ನು ಸಾಮಾನ್ಯ ಸಭೆಯಲ್ಲಿ ಪ್ರೋಸಿಡಿಂಗ್ ಠರಾವು ಇಲ್ಲದೆ ಯಾವ ಆಧಾರದ ಮೇಲೆ ಮಾಡುತ್ತಾರೆ?
14 ನೇ ಹಣಕಾಸಿನಲ್ಲಿ ಕಂಗ್ರಾಳಿ ಬಿ. ಕೆ. ಕನ್ನಡ ಸರಕಾರಿ ಶಾಲೆ, ಮರಾಠಿ ಶಾಲೆ, ಹಾಗೂ ಗೌಂಡವಾಡ ಶಾಲೆಯಲ್ಲಿ 15 ಲಕ್ಷ ಹಣವನ್ನು ಪಿ.ಡಿ.ಓ ದುರ್ಬಳಕೆ ಮಾಡಿದ್ದು ಅನಿಲ ಯಲ್ಲಪ್ಪಾ ಪಾವಶೆ ಇವರು ಪಿ.ಡಿ.ಓ ಮೇಲೆ ಲೋಕಾಯುಕ್ತ ಕೇಸ ನೋಂದಾಯಿಸಿದರು ಇದರ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ.
ಪ್ರೋಸಿಡಿಂಗ್ ಬುಕ್‌ನಲ್ಲಿ ಒಂದೇ ಕಾಮಗಾರಿಯನ್ನು 2 ಬಾರಿ ಬರೆದಿದ್ದಾರೆ. ಅದನ್ನು ಓದದೆ ಅಧ್ಯಕ್ಷ ಹಾಗೂ ಪಿ.ಡಿ.ಓ ಸಹಿ ಮಾಡಿದ್ದಾರೆ. ಈ ರೀತಿ ಪಿ.ಡಿ.ಓ ಅವರಿಗೆ ಕೆಲಸದಲ್ಲಿ ಯಾವುದೇ ಆಸಕ್ತಿಯಿಲ್ಲ.
ನರೇಗಾದಲ್ಲಿ ಕೂಡ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷ ಅನಿಲ ಪವಶಿ ಇವರು ನರೇಗಾ ಕೆಲಸಕ್ಕೆ ಹೋಗದೆ ಇರುವ 19 ಜನರ ಪೇಮೆಂಟ್ ಮಾಡಿದ್ದಾರೆ ಎಂದು ಮಿಡಿಯಾದಲ್ಲಿ ಹೇಳಿದ್ದಾರೆ. ಅದರ ವಿಡಿಯೋ ಇದೆ, ಹಾಗೂ 18/02/2021ರ ಸಾಮಾನ್ಯ ಸಭೆಯ ಪ್ರೋಸಿಡಿಂಗ್‌ನಲ್ಲಿ ಅದರ ವಿವರಣೆ ನೀಡಿದ್ದಾರೆ. ಹಾಗೂ ದಿಲೀಪ್ ಸಾಂಬ್ರೇಕರ್ ಆ ಹುಡುಗ ನನ್ನ ತಪ್ಪಿದೆ ಎಂದು ಒಪ್ಪಿಕೊಂಡಿದ್ದಾನೆ ಆದರೆ 51,000/- ಏನು ಮಾಡಿದ್ದಾರೆ ಅದರ ತನಿಖೆಮಾಡಬೇಕು ಎಂದು ಕೋರಿದ್ದಾರೆ.
15ನೇ ಹಣಕಾಸಿನಲ್ಲಿ SC/ST ಸಮುದಾಯದ ಮಕ್ಕಳಿಗೆ ಕಂಪ್ಯೂಟರ್ ಕ್ಲಾಸಿಗೆ ಹಣವನ್ನು ನೀಡದಿದ್ದ ಕಾರಣ SC ಸಮುದಾಯದ ಮಕ್ಕಳು ಕ್ಲಾಸಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇದರ ಅರ್ಥ ಜಾತೀಯತೆ ಮೂಲಕಾರಣವಾಗಿದೆ. ಹಾಗೂ SC/ST 25% ಕಾಮಗಾರಿ ಆಗಲಿ ಅಥವಾ ಗುತ್ತಿಗೆದಾರರನ್ನಾಗಿ ಯಾವುದೇ ರೀತಿಯ ಮಾಹಿತಿ ನೀಡುತ್ತಿಲ್ಲ. ಇದರರ್ಥ SC/ST ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬೇಕೆಂಬ ಉದ್ದೇಶ ಪಿ.ಡಿ.ಓ ಅವರದ್ದಾಗಿದೆ.
ಗೌಂಡವಾಡ ಗ್ರಾಮದ ಸಂಪೂರ್ಣ ಗ್ರಾಮದ ಚರಂಡಿ ಸ್ವಚ್ಛತೆ ಮಾಡುವುದು ರೂ 287332/- ಎಂಬಿ ನೀಡಿಲ್ಲ ಎಂದು ಹೇಳಿದ್ದಾರೆ.
ಸರ್ವೇ ನಂ.123 ಮತ್ತು 124 ನಾಲಾ ಬಗ್ಗೆ ಸರ್ವೇ ಮಾಡುವುದು ಮತ್ತು 30 ಶೂಟ್ ಬಪ್ಪರ್ ಜೋನ್ ಇರುವುದು ಅಂತಾ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿ ಠರಾವು ಪಾಸ್ ಮಾಡಲಾಯಿತು. ಇದರ ಬಗ್ಗೆ ದಿನಾಂಕ : 19/09/2022 ರಂದು ಪ್ರೋಸಡಿಂಗ್ ಬುಕ್‌ನಲ್ಲ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಠರಾವು ಪಾಸ್ ಮಾಡಲಾಯಿತು. ಇದರ ಕುರಿತು ಅನಿಲ ಪಾವಕ ಅವರು ಮಾಧ್ಯಮದವರ ಮುಂದೆ ಬೈಟ್ ನೀಡಿದ್ದಾರೆ.
ಪಿ.ಡಿ.ಓ ಅವರು 3843 ಕಂಪ್ಯೂಟರ್ ಉತಾರ ಮಾಡಿದ್ದಾರೆ, ಬಿಲ್ ಕ್ಲರ್ಕ್ ಅಂತಾ ನೇಮಕಾತಿಯಾದ ಕೆಂಪಣ್ಣಾ ಮುನವಳ್ಳಿ ದಿ: 08/03/2011 ರಂದು ಅಧ್ಯಕ್ಷರ ಅಪ್ಪಣೆಯ ಮೇರೆಗೆ ವಿಷಯದಲ್ಲಿ ಕೆಂಪಣ್ಣಾ ಮುನವಳ್ಳಿಯವರನ್ನು ಕರ ವಸೂಲಿಗಾರರನ್ನಾಗಿ ನೇಮಕ ಮಾಡಲಾಗಿದೆ. ಅದರ ಪ್ರೊಸಿಡಿಂಗ್ ಕಾಪಿ ಝರಾಕ್ಸ್ ಇದೆ. ಪ್ರೊಸಡಿಂಗ್ ಮಸ್ತಕದಲ್ಲಿ ಅಧ್ಯಕ್ಷರು ಸಹಿನೆ ಇಲ್ಲ ಹಾಗೂ ಕೆಂಪಣ್ಣಾ ಮುನವಳ್ಳಿಯವರ ಸಹೋದರಿಯಾದ ಮಹಾದೇವಿ ಮುನವಳ್ಳಿ ಇವರನ್ನು ಅಂಗವಿಕಲ ಜನರ ಕೆಲಸಕ್ಕಾಗಿ ಗ್ರಾಮ ಪಂಚಾಯತ ವತಿಯಿಂದ ಆಯ್ಕೆ ಮಾಡಿದ್ದಾರೆ. ಒಂದೇ ಕುಟುಂಬದಲ್ಲಿ ಇಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಹೇಳಿದ್ದಾರೆ.
2019-20 ನೇ ಸಾಅನಲ್ಲಿ ಗ್ರಮಪಂಚಾಯತಿ ಕಟ್ಟಡವನ್ನು ಯಾವ ಯೋಜನೆಯಲ್ಲಿ ನಿರ್ಮಿಸಿದ್ದಾರೆ ಹಾಗೂ ಆ ಕಟ್ಟಡದ ಕಾಮಗಾರಿಯ ಹಣವನ್ನು ಇನ್ನುವರೆಗೆ ತೆಗೆಯುತ್ತಿದ್ದಾರೆ. ಅದರ ಕುರಿತು ತನಿಖೆ ಆಗಬೇಕು ಎಂದು ಹೇಳಿದ್ದಾರೆ.