ಬೆಳಗಾವಿ : ಗಡಿನಾಡು ಬೆಳಗಾವಿಯಲ್ಲಿ ಇಂದು ಮತ್ತೊಂದು ಸಾಹಿತ್ಯ ಸಮ್ಮೇಳನದ ಅನುಭವ. ಕನ್ನಡದ ಜೋಡಿಗಳು ಕನ್ನಡ ಡಿಂಡಿಮ ಬಾರಿಸುವ ಮೂಲಕ ಸಪ್ತಪದಿ ತುಳಿದು ಹೊಸ ಜೀವನಕ್ಕೆ ಕಾಲಿಟ್ಟರು.
ಬೆಳಗಾವಿಯ ಹೆಚ್ ಕೆ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹ ಮಹೋತ್ಸವ. ಸಾಕ್ಷಾತ ಕನ್ನಡದ ಹಬ್ಬದಂತೆ ಕಾಣುತ್ತಿತ್ತು
ಕನ್ನಡಿಗ ದೀಪಕ್ ಹಾಗೂ ಕನ್ನಡತಿ ರಾಜೇಶ್ವರಿ ಮದುವೆಯ ಸಮಾರಂಭದ. ಕಲ್ಯಾಣ ಮಂಟಪದ ತುಂಬೆಲ್ಲ ಕನ್ನಡದ ಬಾವುಟಗಳು, ಅಲ್ಲಲ್ಲಿ ಕನ್ನಡದ ನೆಲಕ್ಕಾಗಿ ಹೋರಾಡಿದ ವೀರರ ಚರಿತ್ರೆ ಸಾರುವ ಅಂಶಗಳು ಮದುವೆಗೆ ಬಂದವರಿಗೆಲ್ಲ ಅಚ್ಚರಿ ನಾವಿಲ್ಲಿ ಮದುವೆಗೆ ಬಂದಿದ್ದಾ ಅಥವಾ ಕನ್ನಡದ ಹಬ್ಬಕ್ಕೆ ಎಂಬಂತೆ ವಾತಾವರಣ ನಿರ್ಮಾಣವಾಗಿತ್ತು.
ಮದುವೆ ಆಗಮಿಸಿದ ಎಲ್ಲರಿಗೂ ಕೈಬೀಸಿ ಕರೆಯುವ ಕನ್ನಡದ ಸ್ವಾಗತ ಕಮಾನುಗಳು ಅಲ್ಲದೆ
ವಧು ವರರ ಕೈಯಲ್ಲಿ ಕನ್ನಡಿಗ ಮತಗತು ಕನ್ನಡತಿ ಎಂಬ ಬಂಗಾರದ ಉಂಗುರ.
ಕನ್ನಡ ಧ್ವಜ ಕನ್ನಡ ಪೇಟ ಕನ್ನಡದ ನಾಮಫಲಗಳನ್ನು ಹಾಕಿ ಸಪ್ತಪದಿ ತುಳಿದ ಜೋಡಿ. ಒಟ್ಟಾರೆ ಇಂದು ನಡೆದ ಕಲ್ಯಾಣ ಮಹೋತ್ಸವ ವಿಶೇಷವಾಗಿ ಕೂಡಿದ್ದು
ಇಂತಹ ಸುಂದರ ವೈವಿಧ್ಯಮಯ ಮದುವೆಗೆ ಹುಕ್ಕೇರಿ ಹಿರಮೇಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾಕ್ಷಿಯಾಗಿದ್ದರು.
ಕನ್ನಡದಲ್ಲಿಯೇ ವಿವಾಹದ ಮಂತ್ರ ಪಠಿಸಿದ ಸ್ವಾಮೀಜಿ ಮದುವೇಯ ಮಂತ್ರವೂ ಕೂಡಾ ಕನ್ನಡಲ್ಲಿಯೇ ಪಠಿಸಿ ಸ್ವಾಮೀಜಿಗಳು ಕನ್ನಡತನವನ್ನು ಮೆರೆದರು.
ಕನ್ನಡಿಗ ದೀಪಕ ಎಂದೇ ಖ್ಯಾತರಾಗಿರುವ ವರ ದೀಪಕ ಕನ್ನಡತನವನ್ನು ಉಳಿಸಲು ಮದುವೆಯನ್ನೆ ಸಂಪೂರ್ಣ ಕನ್ನಡಮಯವಾಗಿಸಿ ಇಡೀ ಬೆಳಗಾವಿ ಜಿಲ್ಲೆ ಕನ್ನಡಮಯ ಮಾಡಿರುವದಂತೂ ಇತಿಹಾಸದ ಪುಟ ಸೇರುವಂತೆ ಮಾಡಿದ್ದಾರೆ.