ಬೆಂಗಳೂರು:ಕನ್ನಡ ಬಾವುಟಕ್ಕೆ ಕೇಂದ್ರ ಅಧಿಕೃತ ಮಾನ್ಯತೆ ನೀಡ ಬೇಕೆಂದು ಒತ್ತಾಯಿಸಿ ಕನ್ನಡ ಸಂಘಟನೆಗಳಿಂದ x ಅಭಿಯಾನ ನಡೆದಿದ್ದು ಟಾಪ್ ಟ್ರೆಂಡಿಂಗ್ ಟಾಪಿಕಗಳಲ್ಲಿ ಮೊದಲ ಸ್ಥಾನ ಪಡೆದಿದೆ.
X ಮೈಕ್ರೋ ಬ್ಲಾಗಿಂಗ್ ಮೂಲಕ ಕನ್ನಡದ ಪರ ಹೋರಾಟಗಾರರಾದ ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾ ಶಂಕರ ಪಾಟೀಲ ಹಾಗು ಕರ್ನಾಟಕ ರಕ್ಷಣಾ ವೇಧಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ್ರು ಕನ್ನಡ ಧ್ವಜಕ್ಕೆ ಅಧಿಕೃತ ಧ್ವಜವನ್ನಾಗಿ ಪರಿಗಣಿಸಬೇಕೆಂದು ದನಿ ಎತ್ತಿದ್ದಾರೆ.
ಭಾರತದ ಒಕ್ಕೂಟ ರಾಷ್ಟ್ರ,ಇಲ್ಲಿಯ ಪ್ರತಿ ರಾಜ್ಯಗಳಿಗೆ ತಮ್ಮದೇ ಆದ ಸ್ವತಂತ್ರ ಅಧಿಕಾರ ನಡೆಸುವ ಪರಮಾಧಿಕಾರ ಇದೆ ಎಂದು ಭೀಮಾ ಶಂಕರ್ ಪಾಟೀಲ್ ಹೇಳಿದ್ದಾರೆ .ಆದರೆ ಕೇಂದ್ರ ಎಲ್ಲವನ್ನೂ ಕಿತ್ತುಕೊಂಡು ಒತ್ತಡದ ವ್ಯವಸ್ಥೆ ನಿರ್ಮಿಸಿ ರಾಜ್ಯಗಳ ಮೇಲೆ ಸವಾರಿ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಕ್ಯಾನ್ಸರ್ ರೋಗದಷ್ಟೇ ಮಾರಕ,ಇದನ್ನು ಬೇರು ಸಹಿತ ಕೀಳುವ ಕೆಲಸ ರಾಜ್ಯಗಳಿಂದ ಆಗಬೇಕಿದೆ ಎಂದು ಗುಡುಗಿದ್ದಾರೆ.
ನಾವು ರಾಷ್ಟ್ರಕೂಟರ ನಾಡಿನವರು,ಒಕ್ಕೂಟ ಪದದ ಅರ್ಥವನ್ನು ಆಡಳಿತದ ಮೂಲಕ ಸಾವಿರಾರು ವರ್ಷಗಳ ಹಿಂದೆ ಪ್ರಪಂಚಕ್ಕೆ ಪರಿಚಯಿಸಿದವರು ರಾಷ್ಟ್ರ+ಕೂಟ =ರಾಷ್ಟ್ರಕೂಟ.
ರಾಷ್ಟ್ರಗಳ ಕೂಟಗಳನ್ನು ರಚನೆ ಮಾಡಿ ಆಡಳಿತ ಮಾಡಿದ ನಮಗೆ ಒಕ್ಕೂಟ ವ್ಯವಸ್ಥೆಯ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ಇಲ್ಲ.ನಮ್ಮ ಸಂವಿಧಾನ ಬದ್ಧವಾದ ಹಕ್ಕನ್ನು ಕೇಳುತ್ತಿದ್ದೇವೆ ನಮ್ಮ ನಾಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಲೇಬೇಕೆಂದು ಭೀಮಾ ಶಂಕರ್ ಪಾಟೀಲ್ ಒತ್ತಾಯಿಸಿದ್ದಾರೆ.
ನಮ್ಮ ಹೆಮ್ಮೆಯ ರಾಷ್ಟ್ರಗಿತೆಯ ಸಾಲುಗಳಾದ 'ಪಂಜಾಬ ಸಿಂಧು,ಗುಜರಾತ ಮರಾಠಾ, ದ್ರಾವಿಡ ಉತ್ಕಲ ವಂಗ ಎನ್ನುವ ಸಾಲುಗಳನ್ನು ನಾವು ಎದೆ ತುಂಬಿ ಹಾಡುತ್ತೇವೆ.ಈ ಸಾಲುಗಳಿಗೆ ನಿಜ ಅರ್ಥ ಬರಬೇಕಾದರೆ ನಮ್ಮ ನಾಡ ಬಾವುಟಕ್ಕೆ ಅಧಿಕೃತ ಮಾನ್ಯತೆ ಒಕ್ಕೂಟ ಸರಕಾರ ನೀಡಬೇಕು ಇದು ನಮ್ಮ ಸಂವಿಧಾನ ಬದ್ಧ ಹಕ್ಕು ಎಂದು ಹೇಳಿದ್ದಾರೆ.
ಹಳದಿ ಕೆಂಪು ಬಣ್ಣದ ನಾಡ ಬಾವುಟ ಈಗಾಗಲೇ ಕನ್ನಡಿಗರ ಪ್ರತಿ ಮನೆ ಮನೆಗಳಲ್ಲೂ,ಗಲ್ಲಿಗಲ್ಲಿಗಳಲ್ಲೂ ಹಾರಾಡುತ್ತಿದೆ,ಕನ್ನಡಿಗರ ಬಹುವರ್ಷಗಳ ಬೇಡಿಕೆಯಾದ ನಾಡ ಬಾವುಟಕ್ಕೆ ಮಾನ್ಯತೆ ನೀಡುವ ಕೆಲಸ ಕೇಂದ್ರ ತಕ್ಷಣ ಮಾಡಬೇಕು.ನಾವು ಭಿಕ್ಷೆ ಕೇಳುತ್ತಿಲ್ಲ,ನಮ್ಮ ಸಂವಿಧಾನ ಬದ್ಧ ವಾದ ಹಕ್ಕು ಕೇಳುತ್ತಿದ್ದೇವೆ,ಇಲ್ಲವಾದರೆ ಮುಂದೊಂದು ದಿನ ದೆಹಲಿಯ ಕೇಂಪುಕೋಟೆಯ ಮೇಲೆ ನಮ್ಮ ಬಾವುಟ ಹಾರಿಸಿ ನ್ಯಾಯ ಕೇಳಬೇಕಾದಿತು ಎಚ್ಚರ ಎಂದು ಭೀಮಾ ಶಂಕರ್ ಪಾಟೀಲ್ ಗುಡುಗಿದ್ದಾರೆ.
ನಾಡಿನ ಲೋಕಸಭಾ ಸದಸ್ಯರು ನಾಡ ಬಾವುಟ ವಿಚಾರದಲ್ಲಿ ಗಂಡಸರಾಗಿ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಕನ್ನಡಿಗರ ಮತಗಳು ಬೇಕು ಎನ್ನುವುದಾದರೆ ನಾಡ ಬಾವುಟಕ್ಕೆ ಕೇಂದ್ರದಿಂದ ಅಧಿಕೃತ ಮಾನ್ಯತೆ ಕೊಡಿಸಿ. ಇಲ್ಲವಾದರೆ ಬಿಹಾರೋ,ಗುಜರಾತೋ,ರಾಜಸ್ಥಾನಗಳಲ್ಲಿ ಹೋಗಿ ಚುನಾವಣೆಗೆ ನಿಂತುಕೊಳ್ಳಿ.ನಮ್ಮ ರಾಜ್ಯವನ್ನು ಕೇಂದ್ರದಿಂದ ಕಾಪಾಡಿಕೊಳ್ಳುವ ತಾಕತ್ತು ನಮಗಿದೆ ಎಂದು ಭೀಮಾ ಶಂಕರ್ ಪಾಟೀಲ್ ಹೇಳಿದ್ದಾರೆ.
ನಾಡಿನ ಲೋಕಸಭಾ ಸದಸ್ಯರು ನಾಡ ಬಾವುಟ ವಿಚಾರದಲ್ಲಿ ಗಂಡಸರಾಗಿ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಕನ್ನಡಿಗರ ಮತಗಳು ಬೇಕು ಎನ್ನುವುದಾದರೆ ನಾಡ ಬಾವುಟಕ್ಕೆ ಕೇಂದ್ರದಿಂದ ಅಧಿಕೃತ ಮಾನ್ಯತೆ ಕೊಡಿಸಿ.ಇಲ್ಲವಾದರೆ ಬಿಹಾರೋ,ಗುಜರಾತೋ,ರಾಜಸ್ಥಾನಗಳಲ್ಲಿ ಹೋಗಿ ಚುನಾವಣೆಗೆ ನಿಂತುಕೊಳ್ಳಿ.ನಮ್ಮ ರಾಜ್ಯವನ್ನು ಕೇಂದ್ರದಿಂದ ಕಾಪಾಡಿಕೊಳ್ಳುವ ತಾಕತ್ತು…
— Bhimashankar Patil (@bhimashankarptl) November 11, 2023
ಕನ್ನಡ ಬಾವುಟಕ್ಕೆ ಕೇಂದ್ರ ಅಧಿಕೃತ ಮಾನ್ಯತೆ ನೀಡ ಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಎಕ್ಸ್ (ಟ್ವಿಟರ್ ) ಅಭಿಯಾನವನ್ನು ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ್ರು ಕರ್ನಾಟಕದ ಬಾವುಟಕ್ಕೆ ಮಾನ್ಯತೆ ಸಿಕ್ಕರೆ, ಕನ್ನಡಗರ ಆತ್ಮಾಭಿಮಾನ ಮತ್ತಷ್ಟು ಹೆಚ್ಚಾಗಲಿದೆ. ಈಗ ಇರುವ ಹಳದಿ, ಕೆಂಪು ಬಣ್ಣದ ಬಾವುಟ ಕನ್ನಡಿಗರ ಅಸ್ಮಿತೆಯಾಗಿ ಮನೆಮನಗಳಲ್ಲಿ ಹಲವಾರು ವರ್ಷಗಳಿಂದ ಹಾರುತ್ತಲೆ ಇದೆ, ಆದರೆ ಇಲ್ಲಿಯವರೆಗೂ ನಾಡ ಬಾವುಟಕ್ಕೆ ಸಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಬಾವುಟಕ್ಕೆ ಮಾನ್ಯತೆ ಸಿಕ್ಕರೆ, ಕನ್ನಡಗರ ಆತ್ಮಾಭಿಮಾನ ಮತ್ತಷ್ಟು ಹೆಚ್ಚಾಗಲಿದೆ. ಈಗ ಇರುವ ಹಳದಿ, ಕೆಂಪು ಬಣ್ಣದ ಬಾವುಟ ಕನ್ನಡಿಗರ ಅಸ್ಮಿತೆಯಾಗಿ ಮನೆಮನಗಳಲ್ಲಿ ಹಲವಾರು ವರ್ಷಗಳಿಂದ ಹಾರುತ್ತಲೆ ಇದೆ, ಆದರೆ ಇಲ್ಲಿಯವರೆಗೂ ನಾಡ ಬಾವುಟಕ್ಕೆ ಸಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ. #ಕನ್ನಡಬಾವುಟ_ನಮ್ಮಗುರುತು#KannadaFlag_MyPride
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) November 11, 2023
ಕನ್ನಡ ಬಾವುಟಕ್ಕೆ ಕೇಂದ್ರ ಅಧಿಕೃತ ಮಾನ್ಯತೆ ನೀಡ ಬೇಕು ಎಂದು ಒತ್ತಾಯಿಸಿ ನಡೆಯುತ್ತಿರುವ ಎಕ್ಸ್ (ಟ್ವಿಟರ್ ) ಅಭಿಯಾನವನ್ನು ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ್ರು ಕರ್ನಾಟಕದ ಬಾವುಟಕ್ಕೆ ಮಾನ್ಯತೆ ಸಿಕ್ಕರೆ, ಕನ್ನಡಗರ ಆತ್ಮಾಭಿಮಾನ ಮತ್ತಷ್ಟು ಹೆಚ್ಚಾಗಲಿದೆ. ಈಗ ಇರುವ ಹಳದಿ, ಕೆಂಪು ಬಣ್ಣದ ಬಾವುಟ ಕನ್ನಡಿಗರ ಅಸ್ಮಿತೆಯಾಗಿ ಮನೆಮನಗಳಲ್ಲಿ ಹಲವಾರು ವರ್ಷಗಳಿಂದ ಹಾರುತ್ತಲೆ ಇದೆ, ಆದರೆ ಇಲ್ಲಿಯವರೆಗೂ ನಾಡ ಬಾವುಟಕ್ಕೆ ಸಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.