ಕನ್ನಡ ನಾಮಫಲಕ ಅಳವಡಿಕೆ ಹೋರಾಟ: ಅಂಗಡಿಕಾರರಿಗೆ ಕರವೇ ಎಚ್ಚರಿಕೆ

  • shivaraj bandigi
  • 5 Mar 2024 , 4:50 PM
  • Belagavi
  • 402

ಬೆಳಗಾವಿ :

ನಗರದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವಾಣಿಜ್ಯ ಹಾಗೂ ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕಡ್ಡಾಯವಾಗಿ ಶೇ. 60 ರಷ್ಟು ಕನ್ನಡದಲ್ಲಿರಬೇಕೆಂದು ಸರಕಾರದ ಆದೇಶದ ಗಡುವು ಮುಗಿದರೂ ಇಲ್ಲಿಯವರೆಗೂ ಕನ್ನಡ ನಾಮಫಲಕ ಅಳವಡಿಸಿದವರಿಗೆ ಮಂಗಳವಾರ ಕರವೇ ಕಾರ್ಯಕರ್ತರು ಇಲ್ಲಿನ ಕೆಪಿಟಿಸಿಎಲ್ ರಸ್ತೆಯಿಂದ ಜಾಗೃತಿ ಜಾಥಾ ನಡೆಸಿ ಎಚ್ಚರಿಕೆ ನೀಡಿದರು‌. ಚನ್ನಮ್ಮ ವೃತ್ತದಲ್ಲಿ ಅಳವಡಿಸಲಾದ ಅನ್ಯ ಭಾಷೆಯ ಬ್ಯಾನರ್ ತೆರವು ಮಾಡಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.

ಇದಕ್ಕೂ ಮುನ್ನ ಕರವೇ ಕಾರ್ಯಕರ್ತರು ಕೆಪಿಟಿಸಿಎಲ್ ರಸ್ತೆ ಮಾರ್ಗವಾಗಿ ಕೊಲ್ಲಾಪುರ ವೃತ್ತ, ಅಂಬೇಡ್ಕರ್ ರಸ್ತೆ ಮೂಲಕ ಚನ್ನಮ್ಮ ವೃತ್ತದವರೆಗೆ ಜಾಗೃತಿ ರ್ಯಾಲಿ ಮಾಡಿ, ರಾಜ್ಯ ಸರಕಾರ ಕಡ್ಡಾಯವಾಗಿ ಅಂಗಡಿ ಮುಂಗಟ್ಟುಗಳ ನಾಮಫಲಕ ಶೇ.60 ರಷ್ಟು ಕಡ್ಡಾಯದ ಗಡುವು ಮುಗಿದೆ‌. ಆದರೂ ನಗರದಲ್ಲಿ ಅನ್ಯ ಭಾಷೆಯ ನಾಮಫಲಕಗಳು ರಾರಾಜಿಸುತ್ತಿವೆ. ಸ್ವಯಂ ಪ್ರೇರಿತವಾಗಿ ಕನ್ನಡ ನಾಮಫಲಕಗಳನ್ನು ಅಂಗಡಿಕಾರರು ಅಳವಡಿಸದಿದ್ದರೆ ಕರವೇ ಕಾರ್ಯಕರ್ತರು ಆ ನಾಮಫಲಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ವರಿಕೆ ನೀಡಿದರು.

Read All News