ಬೆಳಗಾವಿಯಲ್ಲಿಯೂ ಕನ್ನಡ ನಾಮಫಲಕ ಕಡ್ಡಾಯವಾಗಬೇಕು

  • shivaraj bandigi
  • 23 Feb 2024 , 2:00 PM
  • Belagavi
  • 445

ಬೆಳಗಾವಿ: ಬೆಳಗಾವಿಯಲ್ಲಿಯೂ ಶೇ.60 ರಷ್ಟು ಕನ್ನಡ ನಾಮಫಲಕ ಅಳವಡಿಸಿ ಕನ್ನಡಿಕರಣವಾಗಬೇಕು‌. ಬೇಕಾದವರೂ ಕಾನೂನು ಹೋರಾಟ ಮಾಡಿದರೂ ಕರವೇ ಹೋರಾಟ ಬಗ್ಗುವುದಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಡಿ.27 ರಂದು ಕರವೇ ಕನ್ನಡ ನಾಮಫಲಕ ಅಳವಡಿಕೆಯ ಹೋರಾಟದಿಂದ ಸಾಕಷ್ಟು ಬದಲಾವಣೆಯಾಗಿದೆ ಎಂದರು.

 ಸರಕಾರ ಫೆ.28ರ ಗಡುವು ನೀಡಿದೆ. ಬೆಳಗಾವಿಯಲ್ಲಿಯೂ ಕನ್ನಡಿಕರಣವಾಗಬೇಕು‌, ಎಲ್ಲ ನಾಮಫಲಕಗಳು ಶೆ.60 ರಷ್ಟು ಕನ್ನಡದಲ್ಲಿಯೇ ಅನುಷ್ಠಾನ ಮಾಡಬೇಕು. ಬೇಕಾದವರು ನ್ಯಾಯಾಲಯಕ್ಕೆ ‌ಮೊರೆ‌ ಹೋಗಬಹುದು ಎಂದರು.

Read All News