ರೈತರ ಮೇಲೆ ದಬ್ಬಾಳಿಕೆ ಮಾಡಿದ ಎಲ್ ಆ್ಯಂಡ್ ಟಿ ಫೈನಾನ್ಸ್ ವಿರುದ್ಧ ಕನ್ನಡ ಸಂಘಟನೆ ಆಕ್ರೋಶ

  • 15 Jan 2024 , 1:35 AM
  • Belagavi
  • 235

ಬೆಳಗಾವಿ: ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಎಲ್ ಆ್ಯಂಡ್ ಟಿ ಫೈನಾನ್ಸ್ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾರ ಕೊಲ್ಲಾಪುರ ವೃತ್ತದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂಜು ಚವ್ಹಾಣ ಎಂಬ ರೈತ ಟ್ಯಾಕ್ಟರ್ ಖರೀದಿಗಾಗಿ ಎಲ್ ಆ್ಯಂಡ್ ಟಿ ಫೈನಾನ್ಸ್ ನಲ್ಲಿ ಲೋನ್ ಪಡೆದುಕೊಂಡಿದ್ದರು. ಎಲ್ಲಾ ಕಂತುಗಳನ್ನು ತುಂಬಿದ ಮೇಲಿಯೂ ಫೈನಾನ್ಸ್ ನವರು ರೈತನ ಟ್ರ್ಯಾಕ್ಟರ್ ತೆಗೆದುಕೊಂಡು ಬಂದು ಹೆಚ್ಚುವರಿ ಹಣ ತುಂಬುವಂತೆ ಪೀಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಟ್ರ್ಯಾಕ್ಟರ್ ಮಾಲೀಕರ ಗಮನಕ್ಕೆ‌ ತರದೆ ಫೈನಾನ್ಸ್ ನಿಂದ ನೋಟಿಸ್ ನೀಡಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಟ್ರಾಕ್ಟರ್ ತೆಗೆದುಕೊಂಡು‌ ಹೋಗಿದ್ದಾರೆ. ತೆಗೆದುಕೊಂಡ ಹೋದ ಟ್ರ್ಯಾಕ್ಟರ್ ಮರಳಿ ಕೊಡುವಂತೆ ಕೇಳಿದರೆ ಅದನ್ನು ಮಾರಾಟ ಮಾಡಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ. ಎಲ್ ಆ್ಯಂಡ್ ಟಿ ಫೈನಾನ್ಸ್ ನ್ನು ಬಂದ್ ಮಾಡಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಶಿವರಡ್ಡಿ ಹುಚ್ಚರಡ್ಡಿ, ಮಲ್ಲಪ್ಪ ಕಾಂಬಳೆ, ರವಿ ಹಡಪದ, ರೇಣುಕಾ ಜಾಲಿಮರದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News