ಗಡಿ ತಾಲೂಕು ಅಥಣಿಯಲ್ಲಿ ಕನ್ನಡಿಗರ ಪ್ರತಿಭಟನೆ

  • 13 Jan 2024 , 11:12 PM
  • Belagavi
  • 147

ಅಥಣಿ: ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಕಪ್ಪು ಮಸಿ ಬಳಿದು ಕಲ್ಲು ಹೊಡೆದ ಮರಾಠಿ ಪುಂಡರ ಕೃತ್ಯ ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.ಕರವೇ ಪ್ರವೀಣಶೆಟ್ಟಿ ಬಣದಿಂದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರಿಗೆ ಹಾರ ಹಾಕಿ ಕನ್ನಡ ಶಲ್ಯೆ ಕೊಟ್ಟು ಧ್ವಜವನ್ನು ಹಿಡಿಸಿ ಗುಲಾಬಿ ನೀಡುವ ಮೂಲಕ ಮಹಾರಾಷ್ಟ್ರ ಸಾರಿಗೆ ಸಿಬ್ಬಂದಿಗಳನ್ನು ಸನ್ಮಾನಿಸಿದರು.

ಅಥಣಿ ಪಟ್ಟಣದ ಹಲ್ಯಾಳ ಸರ್ಕಲ್ ಮತ್ತು ಅಂಬೇಡ್ಕರ್ ವೃತ್ತದಲ್ಲಿ ಮಹಾರಾಷ್ಟ್ರ ಸಾರಿಗೆ ಬಸ್ ತಡೆದ ಕರವೇ ಸದಸ್ಯರು ಮಹಾರಾಷ್ಟ್ರ ಸಿ ಎಮ್ ಎಕನಾಥ ಶಿಂಧೆ ಮತ್ತು ಎಮ್ ಇ ಎಸ್ ಹಾಗೂ ಶಿವಸೇನೆ ಪುಂಡರ ವಿರುದ್ದ ಧಿಕ್ಕಾರ ಕೂಗಿದರಲ್ಲದೆ ಜತ್ ಸೋಲಾಪುರ ಅಕ್ಕಲಕೋಟ ಲಾಥೂರ ಗಳನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಗಡಿ ಕ್ಯಾತೆ ತೆಗೆಯುವ ಮಹಾ ಪುಂಡರಿಗೆ ತಕ್ಕ ಪಾಠ ಕಲಿಸಲು ಕರ್ನಾಟಕದಲ್ಲಿ ಎಮ್ ಇ ಎಸ್ ಮತ್ತು ಶಿವಸೇನೆ ಯನ್ನು ನಿಷೇಧಿಸಬೇಕು ಅಲ್ಲಿನ ಕನ್ನಡಿಗರ ಮೇಲೆ ಹಲ್ಲೆ ಮತ್ತು ಅವಮಾನ ಮಾಡಲಾಗುತ್ತಿದ್ದು ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

Read All News