ಕಾಂತಾರ ಆನ್ OTT : ನಾಲ್ಕು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಗೆ ಸಿದ್ದ
- 14 Jan 2024 , 4:18 PM
- Bengaluru
- 559
ಕನ್ನಡದ ಬ್ಲಾಕ್ ಬಸ್ಟರ್ ಚಲನ ಚಿತ್ರ ಕಾಂತಾರ OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮನಲ್ಲಿ ನಾಳೆ ಬಿಡುಗಡೆಗೊಳ್ಳಲಿದೆ. ಚಿತ್ರದ ಪೋಸ್ಟರ್ ಅನ್ನು ಟ್ವಿಟ್ಟರನಲ್ಲಿ ಹಂಚಿಕೊಂಡ ಅಮೆಜಾನ್ ಪ್ರೈಮ್ “ಎಲ್ಲಾ ಕಾಯುವಿಕೆಗೆ ಅಂತ್ಯ ಹಾಡುತ್ತಿದೆ ಕಾಂತಾರ ಆನ್ ಪ್ರೈಮ್, ನಾಳೆ ಹೊರಬರುತ್ತದೆ. ಕಾಂತಾರ ಒಟಿಟಿಯಲ್ಲಿ ಕನ್ನಡ ,ತಮಿಳು, ತೆಲುಗು, ಮಲಯಾಳಂ ನಾಲ್ಕು ಭಾಷೆಗಳಲ್ಲಿ ಲಭ್ಯವಿರುತ್ತದೆ ಎಂದು ಅಮೆಜಾನ್ ಪ್ರೈಮ್ ಟ್ವಿಟ್ ಮಾಡಿದೆ.