ಪಾಲಿಕೆ ಸದಸ್ಯರ ವಿರುದ್ಧ ಕರವೇ ಆಕ್ರೋಶ

  • shivaraj bandigi
  • 15 Jan 2024 , 5:45 AM
  • Belagavi
  • 420

ಬೆಳಗಾವಿ : 

ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರು ಕನ್ನಡ ಕಡೆಗಣಿಸಿ ಮರಾಠಿ ಹಾಗೂ ಹಿಂದಿ‌ ಭಾಷೆಯಲ್ಲಿ ಮಾತನಾಡಿದ್ದನ್ನು ಖಂಡಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಗುರುವಾರ ಪಾಲಿಕೆಯ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯಲ್ಲಿ ಹಿಂದೆ ಕನ್ನಡ, ಮರಾಠಿ ಸದಸ್ಯರಿದ್ದ ಸಂದರ್ಭದಲ್ಲಿ ಕನ್ನಡ ಸದಸ್ಯರು ಸಭೆಯಲ್ಲಿ ಕನ್ನಡ ಮಾತನಾಡುತ್ತಿದ್ದರು. ಆದರೆ ಪಾಲಿಕೆಯಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಪಕ್ಷಗಳು ಸ್ಪರ್ಧೆ ನಡೆಸಿ ಪಾಲಿಕೆ ಆಡಳಿತ ಹಾಗೂ ವಿಪಕ್ಷಗಳು ಕನ್ನಡದ ಹಿತ ಕಾಯುವ ಬದಲು ಮತ ಬ್ಯಾಂಕ್ ಗಾಗಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಕನ್ನಡ ಭಾಷೆ ಕಡೆಗಣನೆ ಮಾಡಿ ಮರಾಠಿ, ಹಿಂದಿ ಮಾತನಾಡಿದ ಸದಸ್ಯರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.

ಆರ್. ಅಭಿಲಾಷ್, ಪ್ರೇಮ ಚೌಗುಲಾ, ರಾಜು ಕಲಪತ್ರಿ, ನಾಗನಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News