ಕರವೇ ರಾಜ್ಯಾಧ್ಯಕ್ಷ, ಕಾರ್ಯಕರ್ತರ ಬಂಧನ ಖಂಡಿಸಿ ರಸ್ತೆ ತಡೆ

  • shivaraj bandigi
  • 14 Jan 2024 , 8:39 PM
  • Belagavi
  • 541

ಬೈಲಹೊಂಗಲ :  ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯನಗೌಡ ಹಾಗೂ ಇತರೆ 29 ಜನ ಕನ್ನಡ ಕಾರ್ಯಕರ್ತರನ್ನು, 14 ದಿವಸಗಳ ಕಾಲ ನ್ಯಾಯಾಂಗ ಬಂಧನ ಮಾಡಿದ್ದು ಖಂಡನೀಯ, ಕೂಡಲೇ ಎಲ್ಲರನ್ನು ಬಿಡುಗಡೆಗೊಳಿಸಲು, ಆಗ್ರಹಿಸಿ ಕರವೇ ತಾಲೂಕಾ ಘಟಕದಿಂದ ರಸ್ತೆ ನಡೆಸಿ ಪ್ರತಿಭಟಿಸಿದರು. 

ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ನಗರ ಘಟಕ ಅಧ್ಯಕ್ಷ ಶಿವಾನಂದ ಕುರಬೇಟ ಮಾತನಾಡಿ, ಕನ್ನಡ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿರುವದು ಖಂಡನೀಯ ಸದಾ ನಾಡು, ನುಡಿ ಜಲಕ್ಕಾಗಿ ಹೋರಾಟ ನಡೆಸುತ್ತಿರುವಂತಹ ಬಂಧಿಸಿರುವದು ಕನ್ನಡ ನಾಡಿಗೆ ಮಾಡಿದ ದ್ರೋಹವಾಗಿದೆ ಎಂದರು. 

 ಕಿರಣ ಬೆಳಗಾವಿಮಠ, ಸೋಮು ತೋಟಗಿ, ಸೋಯಿಬ ಸಂಗೊಳ್ಳಿ, ಸಲ್ಮಾನ ಮಣಿಯಾರ, ಪಿಂಟು ಕುದರಿ, ವಿಜಯ ತಿವಾರಿ, ಶೊಹಿಲ ಬಾಗೇವಾಡಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Read All News