ಪುಲಾರಕೋಪ ಗ್ರಾಮಕ್ಕೆ ಬಸ್ ಬಿಡಬೇಕೆಂದು ಕರ್ನಾಟಕ ಭೀಮ್ ಸೇನೆಯಿಂದ ಬಸ್ ತಡೆದು ಪ್ರತಿಭಟನೆ

  • Krishna Shinde
  • 14 Jan 2024 , 10:19 PM
  • Belagavi
  • 313

ಬೆಳಗಾವಿ : ಜಿಲ್ಲೆಯ  ಪುಲಾರಕೋಪ ಗ್ರಾಮದ ಪ್ರತಿದಿನ ಬೆಳಗಾವಿಯತ ಶಾಲಾ, ಕಾಲೇಜಗೆ, ನೂರಾರು ಮಕ್ಕಳು ಪ್ರಯಾಣಿಸುತ್ತಾರೆ , ಆದರೆ ಬಸ್ಸಿನ ಭವಣೆ, ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ಶಾಲೆಯನ್ನು ಬಿಡುವಂತಹ ಪರಿಸ್ಥಿತಿ ಉಂಟಾಗಿದೆ. ಈ ಹಳ್ಳಿಗೆ  ಹಲವಾರು ವರ್ಷಗಳಿಂದ ಬಸ್ಸುಗಳು ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು, ವಿದ್ಯಾರ್ಥಿಗಳು ದಿನನಿತ್ಯ. 5/6 KM ನಡೆದುಕೊಂಡು ಬಂದು ಬಸ್ಸ ಹತ್ತಿ ಶಾಲೆಗೆ ಬರಬೇಕಾದಂತಹ ದಾರುಣ ಪರಿಸ್ಥಿತಿ ಇದ್ದು ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.

ಆದ್ದರಿಂದ ಈ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡಿಕೊಂಡುಬೇಕು,  ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಕರ್ನಾಟಕ ಭೀಮ್ ಸೇನೆ ಬೆಳಗಾವಿ ಜಿಲ್ಲಾ ಘಟಕದಿಂದ ಬೈಲಹೊಂಗಲ ತಾಲೂಕು ಬಸ್ ನಿಲ್ದಾಣ ಮುಂದೆ ಬಸ್ ತಡೆದು ಉಗ್ರವಾದ ಧರಣಿ ಪ್ರತಿಭಟನೆ ನಡೆಸುತ್ತೇವೆಂದು ಕರ್ನಾಟಕ ಭೀಮ್ ಸೇನೆ ಬೆಳಗಾವಿ ಜಿಲ್ಲಾ ಅಧ್ಯಕ್ಷ ಪ್ರವೀಣ ಆರ್ ಮಾದರ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಭೀಮ್ ಸೇನೆ ಜಿಲ್ಲಾ ಉಪಾಧ್ಯಕ್ಷ ಅಕ್ಷಯ ಕೆ ಆರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ನೈಹಿಮ ಮುಜಾವರ ಜಿಲ್ಲಾ ಕಾರ್ಯಾಧ್ಯಕ್ಷ ಮಲಪ್ಪ ಅಕಮಡ್ಢಿ ಜಿಲ್ಲಾ ಸಂಚಾಲಕ ಅಜೇಯ ಶಿಂಗೆ, ಜಿಲ್ಲಾ ಸಂಘಟನಾ ಸಂಚಾಲಕ,ನಿಕಿಲ ಕೋಲಕಾರ ಜಿಲ್ಲಾ ಸಹ ಸಂಚಾಲಕ ವಿಜಯ ಕೋಟಕಾರ್ ಬೈಲಹೊಂಗಲ ತಾಲೂಕು ಅಧ್ಯಕ್ಷ ಉದಯ ಬಸೂಜಿ, ಅನೇಕ ಮುಖಂಡರು ಉಪಸ್ಥಿತರಿದ್ದರು.

Read All News