ಕರ್ನಾಟಕ ಎಲೆಕ್ಷನ್ 2023: ಸ್ಟಿರ್ಕ್ಟ್ ರೂಲ್ಸಗಳ ಪಟ್ಟಿ ನೀಡಿದ ಚುನಾವಣಾ ಆಯೋಗ

  • Krishna Shinde
  • 14 Jan 2024 , 11:50 PM
  • Bengaluru
  • 395

ಬೆಂಗಳೂರು :ಮುಂಬರುವ ಕರ್ನಾಟಕ ಎಲೆಕ್ಷನ್ 2023 ಸಲುವಾಗಿ ಸುದ್ದಿ ಗೋಷ್ಠಿ ನಡೆಸಿದ ಚುನಾವಣೆ ಆಯೋಗ ಅನೇಕ ಮಾಹಿತಿಗಳನ್ನು ನೀಡಿದೆ.

2011ರ ಜನ ಗಣತಿಯ ಪ್ರಕಾರ ಕರ್ನಾಟಕದ ಜನಸಂಖ್ಯೆ 6.1 ಕೋಟಿಯಾಗಿದೆ ಎಂದು ಹೇಳಿದ್ದಾರೆ ಮತ್ತು ಕರ್ನಾಟಕ ಶಾಸಕಾಂಗ ಸಭೆಯ ಅವಧಿ 24 ಮೇ 2023ವರೆಗೆ ಇದೆ ಆದ್ದರಿಂದ ಈ ಅವಧಿಯ ಮುಂಚೆಯೇ ಎಲೆಕ್ಷನ್ ಮುಗಿಯಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.

ಕರ್ನಾಟಕದಲ್ಲಿ 224 ಕ್ಷೇತ್ರಗಳಿದ್ದು ಅದರಲ್ಲಿ 36 ಪರಿಶಿಷ್ಟ ಜಾತಿ 15 ಪರಿಶಿಷ್ಟ ಪಂಗಡಗಳಿಗೆ ಸೇರಿವೆ ಎಂದು ಹೇಳಿದೆ.

ಕರ್ನಾಟಕದಲ್ಲಿ 2.62 ಕೋಟಿ ಪುರುಷ ಮತದಾರರು ,2.59ಕೋಟಿಯಷ್ಟು ಮಹಿಳಾ ಮತದಾರರು ಇದರಲ್ಲಿ  80 ಗಿಂತ ಹೆಚ್ಚು ವಯಸ್ಸಾಗಿರುವ 12,15,763 ಜನ ಇದ್ದಾರೆ ಮತ್ತು 9ಲಕ್ಷ17 ಸಾವಿರ ಫಸ್ಟ್ ಟೈಮ್ ವೋಟರ್ಸ್ (ಮೊದಲ ಬಾರಿಗೆ ವೋಟ್ ಮಾಡುವವರು ) ಇದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ನಿಮ್ಮ ಹೆಸರನನ್ನು ಎಲೆಕ್ಷನ್ ರೋಲ್ ನಲ್ಲಿ ಚೆಕ್ ಮಾಡಲು voter help line app (ಆಂಡ್ರಾಯ್ಡ್ ಅಥವಾ ios ) ಬಳಕೆ ಮಾಡಲು ಆಯೋಗ ತಿಳಿಸಿದಿದೆ ಇದರಿಂದ ನಿಮ್ಮ ಬೂತ್ ಮತ್ತು ರಿಸಲ್ಟಗೆ ಸಂಬಂದಿಸಿದ ಎಲ್ಲ ಮಾಹಿತಿ ಪಡೆಯಬಹುದು ಎಂದು ತಿಳಿಸಿದೆ.

ಸುವಿಧಾ  ಪೋರ್ಟಲ್ ( suvidha.eci.gov.in ಬಗ್ಗೆ ಮಾಹಿತಿ ನೀಡಿದ ಆಯೋಗ ಈ ಪೋರ್ಟಲ್ ಪೊಲಿಟಿಕಲ್ ಪಾರ್ಟಿಗಳು ಮತ್ತು ಅಭ್ಯರ್ಥಿಗಳಿಗಾಗಿ ಡಿಸೈನ್ ಮಾಡಲಾಗಿದೆ ಎಂದು ಹೇಳಿದೆ ,ಈ ಪೋರ್ಟಲನಲ್ಲಿ ಅಭ್ಯರ್ಥಿಗಳು ನಾಮಿನೇಷನ್ ಮತ್ತು ಅಫಿಡಿವೇಟ್ ಆನ್ಲೈನ್ ಫೈಲ್ ಮಾಡಬಹುದು ಮತ್ತು ರ್ಯಾಲಿ ಮಾಡಲು ಪರ್ಮಿಷನ್ ಕೂಡ ಈ ಪೋರ್ಟಲನಿಂದ್ ಪಡೆಯಬಹುದು ಎಂದು ಹೇಳಿದೆ.

ಪ್ರತಿ ಜಿಲ್ಲಾಧಿಕಾರಿಗಳಿಗೆ ಸ್ಟ್ರಿಕ್ಟ್ ಆರ್ಡರ್ ಮಾಡಿರುವುದಾಗಿ ತಿಳಿಸಿದ ಆಯೋಗ ರ್ಯಾಲಿ ,ಮೀಟಿಂಗ್ ಮತ್ತು ಇತರೆ ಕಾರ್ಯಕ್ರಮಗಳಿಗೆ ಮೊದಲು ಪರ್ಮಿಷನ ಕೇಳಿದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದೆ.

KYC ( Know your candidate)

ಕ್ರಿಮಿನಲ್ ರೆಕಾರ್ಡ್ ಇರುವ ಅಭ್ಯರ್ಥಿಗಳ ಪಟ್ಟಿಯನ್ನು ಈ affidavit.eci.gov.inನಲ್ಲಿ ಲಿಸ್ಟ್ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.

ಪ್ರತಿ ಅಭ್ಯರ್ಥಿಗಳು ಕನಿಷ್ಟ 3 ನ್ಯೂಸ್ ಪೇಪರಗಳಲ್ಲಿ ತಮ್ಮ ಕ್ರಿಮನಲ್ ಚರಿತ್ರೆಬಗ್ಗೆ ಪಬ್ಲಿಶ್ ಮಾಡಲೇ ಬೇಕು ಎಂದು ಆಯೋಗ ಹೇಳಿದೆ ಮತ್ತು ಈ ಪೋರ್ಟಲ್ ಪ್ರತಿ ಅಭ್ಯರ್ಥಿಗಳ ಆಸ್ತಿಪಾಸ್ತಿಯ ಫುಲ್ ಡೀಟೇಲ್ಸ ಹೊಂದಿದೆ ಎಂದು ಹೇಳಿದೆ.

ಪ್ರತಿ ಪಾರ್ಟಿ ತಮ್ಮ್ ವೆಬಸೈಟ್ ಮತ್ತು ನ್ಯೂಸ್ ಪೇಪರನಲ್ಲಿ ತಾವು ಕ್ರಿಮಿನಲ ಬ್ಯಾಕಗ್ರೌಂಡ ಇರುವ ಅಭ್ಯರ್ಥಿಗೆ ಯಾಕೆ ಟಿಕೆಟ್ ನೀಡುತಿದ್ದೇವೆ  ಎಂದು ಸಂಕ್ಷಿಪ್ತವಾಗಿ ಪಬ್ಲಿಷ ಮಾಡಲೇ ಬೇಕು ಎಂದು ಆಯೋಗ ಹೇಳಿದೆ.


cvigil mobile app 

cvigil : citygen vigilant app 

ಈ app ಮೂಲಕ ಪ್ರತಿ ನಾಗರಿಕರು ತಮ್ಮ್ ಸುತ್ತ ಮುತ್ತ ನಡೆಯುತ್ತಿರುವ ಅನೈತಿಕ ಕೆಲಸ ಅಥವಾ ಅನ್ಯಾಯ ಅಂದರೆ ಹಣ ಹಂಚುವುದು ,ಗಿಫ್ಟ್ಸ್ ಕೊಡುವುದು ಮುಂತಾದ ಕಾನೂನಿಗೆ ವಿರೋಧವಾದ ಕೆಲಸಗಳು ನಡೆದರೆ ಫೋಟೋ ತೊಗೊಂಡು appನಲ್ಲಿ ಅಪ್ಲೋಡ ಮಾಡಲು ತಿಳಿಸಿದೆ ಮತ್ತು ಮಾಹಿತಿ ಕೊಟ್ಟವರ ಹೆಸರನ್ನು ಗುಪ್ತವಾಗಿ ಕಾಪಾಡಲಾಗುತ್ತದೆ ಮತ್ತು ಪ್ರತಿ ಕಂಪ್ಲೇಂಟ್ 100 ನಿಮಿಷದಲ್ಲಿ ಪರಿಹರಿಸಲಾಗುತ್ತದೆ ಎಂದು ಆಯೋಗ ಹೇಳಿದೆ.

Read All News