ಬೆಳಗಾವಿ: ಬೆಳಗಾವಿ ನಗರದಲ್ಲಿ ಆಚರಿಸುವ ಹಬ್ಬಗಳಿಗೆ ಅದರದೇ ಆದ ವಿಶೇಷತೆ ಇದೆ ಅದೇ ರೀತಿ ಕೃಷ್ಣ ಜನ್ಮಾಷ್ಠಮಿ ಕೂಡಾ ಒಂದು.
ಹೌದು ಬೆಳಗಾವಿ ನಗರದಲ್ಲಿ ನಡೆದ ಕೃಷ್ಣನ ಜನ್ಮಾಷ್ಠಮಿ ಕಾರ್ಯಕ್ರಮಕ್ಕೆ ಶಾಸಕ ಅನಿಲ್ ಬೆನಕೆ ಹಾಗೂ ಪೃಥ್ವಿ ಸಿಂಗ್ ಪೌಂಡೇಶನ ಅಧ್ಯಕ್ಷ ಹಾಗೂ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಹಾಗೇಯೆ ಶಾಲಾ ಮಕ್ಕಳು ಕೂಡಾ ಶಾಲೆಗಳಿಗೆ ಹೋಗುವಾಗ ಕೃಷ್ಣನ ವೇಷ ಧರಿಸಿಕೊಂಡು ವಿಶೇಷವಾಗಿ ಕೃಷ್ಣನ ಜನ್ಮಾಷ್ಠಮಿ ಅಚರಿಸುತ್ತಾರೆ .ಅದೇ ರೀತಿ ನಗರದ ನರಗುಂದಕರ ಭಾವಿ ಚೌಕದಲ್ಲಿ ವಿವಿಧ ಸ್ಪರ್ಧೆಗಳನ್ನ ಆಯೋಜನೆ ಮಾಡಲಾಗಿತ್ತು. 20 ಅಡಿ ಎತ್ತರದಲ್ಲಿ ಕಟ್ಟಿದ ಕೃಷ್ಣನ ಕುಡಿಕೆಯನ್ನ ಒಡೆಯುವ ಮೂಲಕ ಸಂಭ್ರಮದಿಂದ ಕೃಷ್ಣನ ಜನ್ಮಾಷ್ಠಮಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಫ್ಯಾನ್ಸಿ ಡ್ರೇಸ್ ಸ್ಪರ್ಧೆ,ನೃತ್ಯ ಸ್ಪರ್ಧೆ,ಹಾಗೂ ಇನ್ನುಳಿದ ಸ್ಪರ್ಧೆಗಳನ್ನ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೃಷ್ಣನ ಕುಡಿಕೆ ಒಡೆಯುವ ಸ್ಪರ್ಧೆ ನಡೆಯಿತು.ಎಲ್ಲರೂ ಕೂಡಾ ಸಂಭ್ರಮದಿಂದ ಕೃಷ್ಣನ ಜನ್ಮಾಷ್ಠಮಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉತ್ತರ ಶಾಸಕರಾದ ಅನಿಲ್ ಬೆನಕೆ,ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್, ಮಹಾನಗರ ಪ್ರಧಾನ ಕಾರ್ಯದರ್ಶಿ ಮುರಗೇಂದ್ರ ಗೌಡ , ಕಾರ್ಪೊರೇಟರ್ ನಿಖಿಲ್ ಮುರ್ಕುಟೆ, ಬಿಜೆಪಿ ಯುವಕ ಮಂಡಳಿ ಅಧ್ಯಕ್ಷ ತಾಜ್ ಶೇಖ್ ಮತ್ತು ವೀಣಾ ಬೆನಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.