ಅಮರೇಶ್ವರ ಮಹಾರಾಜರ ಹುಟ್ಟು ಹಬ್ಬದ ನಿಮಿತ್ಯ ಕೃಷ್ಣಾ ನದಿ ಸ್ವಚ್ಛಗೊಳಿಸುವ ಕಾರ್ಯಕ್ರಮ

  • shivaraj bandigi
  • 17 Apr 2024 , 12:04 PM
  • Belagavi
  • 388

ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಕೃಷ್ಣ ನದಿ ದಡದಲ್ಲಿ ಅಮರೇಶ್ವರ ಮಹಾರಾಜರ ಹುಟ್ಟು ಹಬ್ಬದ ನಿಮಿತ್ತವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ ಸ್ವಯಂಸೇವಕರು ಕೃಷ್ಣ ನದಿ ದಡವನ್ನು ಸ್ವಚ್ಛಗೊಳಿಸಿದರು 

 ಇದೇ ವೇಳೆ ಮಾತನಾಡಿದ ಅಮರೇಶ್ವರ ಮಹಾಸ್ವಾಮಿಗಳು ರಾಜ್ಯದ ಈಗಾಗಲೇ ನೀರಿನ ಕೊರತೆ ತುಂಬಾ ಉಂಟಾಗಿದ್ದು ಎಲ್ಲರೂ ನೀರನ್ನು ಮಿತವಾಗಿ ಬಳಸಬೇಕು ನೀರಿನ ಪ್ರಾಮುಖ್ಯತೆಯ ಕುರಿತು ತಿಳಿ ಹೇಳಬೇಕು ಇದೇ ರೀತಿ ಮುಂದುವರೆದರೆ ಮುಂದಿನ ಪೀಳಿಗೆಗೆ ತುಂಬಾ ಕಷ್ಟದಾಯಕ ಜೀವನವನ್ನು ನಡೆಸಬೇಕಾಗುತ್ತದೆ ಎಲ್ಲರೂ ಒಂದು ನಿರ್ಧಾರ ಮಾಡಬೇಕಿದೆ ಪ್ರತಿ ಮನೆಗೂ ಸುಮಾರು ಐದರಂತೆ ಮರಗಳನ್ನು ನೆಟ್ಟು ಪರಿಸರವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು  

ವರದಿ   : ರಾಹುಲ್   ಮಾದರ

Read All News