ಗಂಗಾವತಿ :- ಶಾರ್ಟ ಸರ್ಕಿಟ್ ನಿಂದ ಹುಲ್ಲಿನ ಬಣಿವೆ ಬೆಂಕಿಗೆ ಆಹುತಿಯಾದ ಘಟನಾ ಸ್ಥಳ ಗಂಗಾವತಿ ವಿಧಾನಸಭಾ ಕ್ಷೇತ್ರದ ಗೂಗಿ ಬಂಡಿ ಗ್ರಾಮದ ರೈತ ಬೈಲಪ್ಪನ ಮನೆಗೆ KRPP ಪಕ್ಷದ ಪದಾಧಿಕಾರಿಗಳು ಭೇಟಿಯಾಗಿ ರೈತನಿಗೆ ಸಾಂತ್ವನ ಹೇಳಿದರು.
ಯುವ ಘಟಕದ ರಾಜ್ಯಾಧ್ಯಕ್ಷರಾದ ಭೀಮಾಶಂಕರ ಪಾಟೀಲ ಅವರು ಮಾತನಾಡಿ KRPP ಪಕ್ಷ ಯಾವತ್ತಿಗೂ ರೈತರ ಧ್ವನಿಯಾಗಿ ಕೆಲಸ ಮಾಡುತ್ತಿದೆ.ರೈತರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿ ಅವರ ನೋವಿಗೆ ಧ್ವನಿಯಾಗುಂತೆ ನಮ್ಮ ಪಕ್ಷದ ಶಾಸಕರಾದ ಶ್ರೀ ಗಾಲಿ ಜನಾರ್ದನ ರೆಡ್ಡಿ ಅವರು ಆದೇಶಿಸಿದ್ದಾರೆ.ಅವರ ಆದೇಶವನ್ನು ಪಕ್ಷದ ಪ್ರತಿಯೊಬ್ಬ ಪದಾಧಿಕಾರಿಗಳು ಪಾಲಿಸುತ್ತಿದ್ದೆವೆ.
ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ಹುಲ್ಲು ಸುಟ್ಟು ಹೋಗಿರುವುದು ನೋವಿನ ಸಂಗತಿ.ಈ ರೀತಿ ಅವಘಡಗಳು ಸಂಭವಿಸಿದಾಗ ಅಧಿಕಾರಿಗಳು ತಕ್ಷಣ ರೈತರ ನೆರವಿಗೆ ಧಾವಿಸಿ ರೈತರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.ರೈತ ಬೈಲಪ್ಪನ ನೋವಿಗೆ ಧ್ವನಿಯಾಗಿ KRPP ನಿಲ್ಲುತ್ತದೆ.ಸರಕಾರದಿಂದ ಸಿಗುವ ಎಲ್ಲಾ ರೀತಿಯ ಸವಲತ್ತುಗಳನ್ನು ಬೈಲಪ್ಪನವರಿಗೆ ಕೊಡಿಸುತ್ತೇವೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮನೋಹರ ಗೌಡರು ತಹಶಿಲ್ದಾರರ ಜೊತೆಯಲ್ಲಿ ದೂರವಾಣಿಯಲ್ಲಿ ಮಾತನಾಡಿ ಸರಕಾರದಿಂದ ತಕ್ಷಣ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿದರು.
ನಗರಾಧ್ಯಕ್ಷ ವಿರೇಶ ಬಲಕುಂದಿ, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಸಾ ದಲಭಂಜನ,ಆನೆಗುಂದಿ ಜಿಲ್ಲಾ ಪಂಚಾಯತ ವ್ಯಾಪ್ತಿಯ TG ಬಾಬು,ಮಂಜುನಾಥ ಕಲಾಲ,ಬಾಬು ರೆಡ್ಡಿ,ಸಂಗಾಪೂರ ಗ್ರಾಮ ಪಂಚಾಯತಿ ಅಧ್ಯಕ್ಷ ಹರೀಶ್,ಗ್ರಾಮಪಂಚಾಯಿತಿ ಸದಸ್ಯ ಬಿ,ಗೋಪಿ,ಜೀಲಾನ ಪಾಶಾ ಸೇರಿದಂತೆ ಇತರರು ಉಪಸ್ಥಿತರಿದ್ದರು.