ಕುಡಚಿ : ಸಮೀಪದ ಮೋರಬ ಗ್ರಾಮದಲ್ಲಿ ರಸ್ತೆಯ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು ಹಬ್ಬದ ದಿನದಂದೇ ರಸ್ತೆಯಲ್ಲಿಯೇ ಸಾರ್ವಜನಿಕ ಗಣಪ ನಿಂತ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದ ಹಾರುಗೇರಿ ಹಾಗೂ ವಗ್ಗೆ ಕುಟುಂಬದ ನಡುವೆ ಇರುವ ರಸ್ತೆಯ ವಿಚಾರವಾಗಿ ಎರಡೂ ಕುಟುಂಬಗಳ ಮಧ್ಯ ನಡೆದ ಗಲಾಟೆಯಿಂದ ನಡು ರಸ್ತೆಯಲ್ಲಿಯೇ ಕಲ್ಲು ಮುಳ್ಳು ಹಾಕಿ ರಸ್ತೆ ಬಂದ್ ಮಾಡಿದ ಹಾರುಗೇರಿ ಕುಟುಂಬಸ್ಥರು. ನಿನ್ನೆಯೂ ಸಹ ರಸ್ತೆಯ ವಿಚಾರವಾಗಿ ಜಗಳಾಡಿಕೊಂಡಿದ್ದರು.
ಯಾವುದೇ ವಾಹನಗಳು ಹೋಗದಂತೆ ರಸ್ತೆ ಬಂದ್ ಮಾಡಲಾಗಿದ್ದು, ಗಣಪತಿಯೂ ಸಹ ದಾರಿ ಮದ್ಯೆಯೇ ಕುಳಿತುಕೊಳ್ಳುವಂತಾಗಿದೆ.
ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.