ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯು ದೂರದೃಷ್ಠಿ ಯೋಜನೆಯಾಗಿದ್ದು, ಕುರಿಗಾರ ಬದುಕಿನಲ್ಲಿ ಆಶಾಕಿರಣ ತರುವಂತಾಗಿದೆ. ಇದಕ್ಕೆ ಕರ್ನಾಟಕ ರಾಜ್ಯ ಘನ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸರ್ಕಾರ ಇನ್ನೊಂದು ಮಹತ್ತರ ಯೋಜನೆಯನ್ನು ಕರ್ನಾಟಕದ ಎಲ್ಲ ಕುರಿ ಮತ್ತು ಆಡು ರೈತ ಉತ್ಪಾದಕ ಕಂಪನಿಗಳನ್ನು ನಿರ್ಮಿಸುವುದಾಗಿದೆ. ಈಗಾಗಲೇ ರಾಜ್ಯದಲ್ಲಿ 75 ಕ್ಕೂ ಹೆಚ್ಚು ಇಂತಹ PFOಗಳು ಕಾರ್ಯಾರಂಬಗೊಂಡಿವೆ. ಇಲ್ಲಿ ಸಾವಿರಾರು ಜನ ಬಡ ಕುರಿಗಾರರು ಮತ್ತು ಆಡು ಉತ್ಪಾದಕರು ಸದಸ್ಯರಾಗಿದ್ದು ಮುಖ್ಯವಾಗಿ ಉತ್ಪಾದನೆ ಮತ್ತು ಮಾರುಕಟ್ಟೆಗೆ ಪ್ರಬಲವಾದ ವೇದಿಕೆಯಾಗಿ ರೂಪಗೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಈ ರೈತ ಉತ್ಪಾದಕ ಸಂಸ್ಥೆಗಳ ಪಾತ್ರ ಪ್ರಮುಖವಾಗಿ ಆರ್ಥಿಕತೆಯನ್ನು ಬಲಪಡಿಸುವ ದಿಕ್ಕಿನಲ್ಲಿ ವೇದಿಕೆ ಆಗುತ್ತಲಿದೆ.