ಅತಿಯಾದ ರಾಸಾಯನಿಕ ಬಳಸದಂತೆ ರೈತರಿಗೆ ಕಿವಿ ಮಾತು ಹೇಳಿದ ಲಕ್ಷ್ಮಣ ಸವದಿ

  • shivaraj bandigi
  • 15 Jan 2024 , 8:51 AM
  • Belagavi
  • 521

ಅಥಣಿ :ಸಾವಯವ ಕೃಷಿ ಇಂದಿನ ಅಗತ್ಯವಿದೆ. ಮುಂಬರುವ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಬಿಟ್ಟು ಹೋಗುವದು ಪ್ರತಿಯೊಬ್ಬರ ಕರ್ತವ್ಯ.

ಇಂದಿನ ಅತಿಯಾದ ಗೊಬ್ಬರ,ಕ್ರಿಮಿನಾಶಕ ಔಷಧಿ ಬಳಕೆ ಮಾಡುತ್ತಿರುವದರಿಂದ ಭೂಮಿ ಫಲವತ್ತತೆ ಕಳೆದುಕೊಂಡು ಬರಡು ಭೂಮಿಯಾಗಿ ಮಾರ್ಪಡಾಗುತ್ತಿದೆ ಪ್ರತಿಯೊಬ್ಬರು ಇಂದು ಜಾಗೃತರಾಗುವುದು ಅಗತ್ಯವಿದೆ ಎಂದು ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿ ವಿಧಾನಸಭಾ ಸದಸ್ಯರಾದ ಲಕ್ಷ್ಮಣ  ಸವದಿ  ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಹಮ್ಮಿಕೊಂಡ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಥಣಿ ಕೃಷಿ ಇಲಾಖೆ, ಅಥಣಿಯ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ಬರುವ ದಿನಮಾನದಲ್ಲಿ ಸಾವಯವ ಕ್ರಷಿಗೆ ಆದ್ಯತೆ ನೀಡುವ ಅಗತ್ಯವಿದೆ. ಸ್ವಾತಂತ್ರ ಕಾಲದ ನಂತರ ಹೈಬ್ರಿಡ್ ಬಿಜಗೊಬ್ಬರ ಬಳಕೆ ಮಾಡುವತ್ತ ಒಲವು ತೋರಿದ್ದರಿಂದ ನಮ್ಮ ಕೃಷಿ ನೀತಿ ತಪ್ಪಾದ ದಾರಿ ಹಿಡಿದದ್ದರಿಂದ ಇಂದು ಸಾಕಷ್ಟು ಹಾನಿಗೋಳಗಾಗಿದ್ದೇವೆ. ಪ್ರತಿ ರೈತರು ಹತ್ತು ಗುಂಟೆಯಲ್ಲಿ  ಸಾವಯವ ಕೃಷಿ ಮಾಡಿ ತರಕಾರಿ ಬೆಳೆದು ಆರೋಗ್ಯ ರಕ್ಷಣೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಈ ವರ್ಷದಿಂದ ಕೃಷಿ ಭಾಗ್ಯಯೋಜನೆ  ಪುನ್ಹ ಆರಂಭಿಸಿದ್ದೇವೆ ಕೃಷಿ ಹೋಂಡ ಸೇರಿದಂತೆ ಹಲವು ಯೋಜನೆಗಳನ್ನು ರೈತರಿಗೆ ಅನುಕೂ ಲವಾಗಲಿದೆ ಎಂದು ಹೇಳಿದರು. ಕೇಂದ್ರ ಸರಕಾರ ಇತೆನಾಲ್ ಗೆ 90 ₹ ಪ್ರತಿ ಲೀಟರ್ ಗೆ ನೀಡಬೇಕು ಇದರಿಂದ ರೈತರಿಗೆ ಪ್ರತಿ ಟನ್ ಕಬ್ಬಿಗೆ 5000 ದರ ನೀಡಲು ಸಾಧ್ಯ ಇದರಿಂದ ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳು ವದನ್ನು ತಡೆಘಟ್ಟಬಹುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕಾಗವಾಡ ವಿಧಾನಸಭಾ ಸದಸ್ಯರಾದ ಭರಮಗೌಡಾ (ರಾಜು) ಅ ಕಾಗೆ ಮಾತನಾಡುತ್ತಾ  ನಿಸರ್ಗದ ವೈಫರಿತ್ಯದಿಂದ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ.ಹೀಗಾಗಿ ರೈತರು ಆಧುನಿಕ ಹನಿ ನೀರಾವರಿ ಹಾಗೂ ವಿವಿಧ ಯೋಜನೆ ಅಳವಡಿಸಿಕೊಳ್ಳುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗಬೇಕು. ಇಂದಿನ ಯುವ ಪೀಳಿಗೆ ಕೃಷಿಯತ್ತ ಮುಖ ಮಾಡುತ್ತಿಲ್ಲ. ಶ್ರಮಜೀವಿಗಳಾಗುತ್ತಿಲ್ಲ.ಇಂದು ಅಥಣಿ ತಾಲೂಕಿನಲ್ಲಿ ಕೃಷ್ಣಾನದಿ ಪಾತ್ರದಲ್ಲಿ ಸವಳು ಜವಳು ಪೂರ್ವಭಾಗದಲ್ಲಿ ಕೊಟ್ಟಲಗಿ ಕಕಮರಿ ಸೇರಿದಂತೆ ಹಲವು ಗ್ರಾಮಗಳು   ನೀರಾವರಿ ವಂಚಿತವಾಗಿವೆ. ಬರಗಾಲ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಈ ಭಾಗಗಳನ್ನು ಶಿಘ್ರವಾಗಿ ನೀರಾವರಿ ಸೌಲಭ್ಯ ಒದಗಿಸುವ ಅಗತ್ಯವಿದೆ ಎಂದು ಹೇಳಿದರು.   

ಈ ಸಂದರ್ಭದಲ್ಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯಡಿ 400 ತುಂತುರು ಘಟಕಗಳನ್ನು ವಿತರಿಸಲಾಯಿತು.

 ಕೃಷಿ ಸಂಸ್ಕರಣೆ ಯೋಜನೆಯಡಿ ವಿವಿಧ ಪಲಾನುಭವಿಗಳಿಗೆ ಕೃಷಿ ಸಂಸ್ಕರಣಾ ಘಟಕಗಳನ್ನು ವಿತರಿಸಲಾಯಿತು.

 ವಿಶ್ವ ಬ್ಯಾಂಕ ನೇರವಿನ ರಿವಾರ್ಡ ಯೋಜನೆಗೆ ಚಾಲನೆ ಹಾಗೂ ರೈತರಿಗೆ ಭೂ ಸಂಪನ್ಮೂಲ ಮಾಹಿತಿ (LRI) ಕಾರ್ಡಗಳ ವಿತರಣೆ. ಒಣಬೇಸಾಯದ ರೈತರ ಸಲುವಾಗಿ ಕರ್ನಾಟಕ ಘನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕೃಷಿ ಭಾಗ್ಯ (ಕೃಷಿ ಹೊಂಡ) ಯೋಜನೆಗೆ ಚಾಲನೆ. ಸಾಲಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಸಾಂತ್ವನ ಹಾಗೂ 5 ಲಕ್ಷ ರೂ. ಪರಿಹಾರಧನದ ದೃಡಿಕರಣ ಪತ್ರ ವಿತರಣೆ ಮಾಡಲಾಯಿತು.

ಈ ವೇಳೆ  ತಹಸೀಲ್ದಾರ್ ವಾಣಿ ಯು  ಬೆಳಗಾವಿ ಜಂಟಿ ಕೃಷಿ ನಿರ್ದೇಶಕರಾದ  ಶಿವನಗೌಡ ಎಸ್‌ ಪಾಟೀಲ ಎಚ್. ಡಿ. ಕೋಳೆಕರ ಉಪ ಕೃಷಿ ನಿರ್ದೇಶಕರು, ಚಿಕ್ಕೋಡಿ , ನಿಂಗಣ್ಣ ಬಿರಾದಾರ ಸಹಾಯಕ ಕೃಷಿ ನಿರ್ದೇಶಕರು, ಅಥಣಿ ತಾಲೂಕು ಪಂಚಾಯತ್ ಕಾನಿ ಅಧಿಕಾರಿ ಶಿವಾನಂದ ಕಲ್ಲಾಪುರ, ಸುರೇಶ ಮಾಯಣ್ಣವರ, ಚಂದ್ರಕಾಂತ ಇಮ್ಮಡಿ,  ದುಂಡಪ್ಪ ಅಸ್ಕಿ, ಅಮರ ದುರ್ಗಣ್ಣವ್ವರ, ಸಂಜಯ್ ನಾಡಗೌಡ, ರಾಮನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read All News