ಅದ್ದೂರಿಯಾಗಿ ಅಂಗನವಾಡಿ ಕಾರ್ಯಕರ್ತೆಯ ಬಿಳ್ಕೊಡುಗೆ

  • Shivaraj Bandigi
  • 6 Jan 2024 , 11:40 PM
  • Belagavi
  • 433

ಅಥಣಿ : ತಾಲೂಕಿನ ಹಲ್ಯಾಳ ಗ್ರಾಮದ ಅಕ್ಕಮಹಾದೇವಿ ಬಾಬು ಶಿಂಗೆ ಅಂಗನವಾಡಿ ಕೇಂದ್ರ ಸಂಖ್ಯೆ ಎರಡರಲ್ಲಿ ಸುಮಾರು 28 ವರ್ಷಗಳ ಕಾಲ ಸತತ ಸೇವೆ ಸಲ್ಲಿಸಿದ ಅಂಗನವಾಡಿ ಕೇಂದ್ರ (2) ಕಾರ್ಯಕರ್ತಿಯಾದ ಅಕ್ಕಮಹಾದೇವಿ ಅವರನ್ನು   ಇಂದು ಅದ್ದೂರಿಯಾಗಿ ಬೀಳ್ಕೊಡಲಾಯಿತು.

ಅಂಗನವಾಡಿ ಕೇಂದ್ರ (1) ಒಂದರ ಕಾರ್ಯಕರ್ತೆಯಾದ ಶೈಲಾ ಮಾದರ ಮಾತನಾಡಿ ಅಂಗನವಾಡಿ 2ನೇ ಕೇಂದ್ರದ ಶಿಕ್ಷಕಿಯಾದ ಅಕ್ಕಮಹಾದೇವಿ ಅವರು ನಮ್ಮೊಂದಿಗೆ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ ಅವರು ವರ್ಗದ ಮಕ್ಕಳನ್ನು ತಮ್ಮ ಮಕ್ಕಳೇ ಎಂದು ಭಾವಿಸಿ ಅವರ ಲಾಲನೆ ಪಾಲನೆ ಮಾಡಿ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದ್ದಾರೆ ಮುಂಬರುವ ಅವರ ಜೀವನವು ಸುಖ ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈರಿಸಿದರು.


ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರಾದ ಶೈಲಾ ಮಾದರ್, ಭಾರತೀ ಕಾಂಬಳೆ, ಸುನಿತಾ ಕಾಂಬಳೆ, ರೇಷ್ಮಾ ಕಾಂಬಳೆ, ಪಾರ್ವತಿ ಮಠದ, ಹನಿಮಾ ಮುಲ್ಲಾ,ಮಮತಾಜ್ ನಾಯಕವಾಡಿ,  ರಮಿತಾ ಬಿ ಇ ಸುಪ್ರೋವೈಸರ್, ವಿವಿಧ ಗ್ರಾಮಗಳಿಂದ ಆಗಮಿಸಿದ ಕಾರ್ಯಕರ್ತರು ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕರು ಈ ಬಿಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು

Read All News