ರಡ್ಡಿ ಸಮಾಜದ ನೂತನ ಶಾಸಕರಿಗೆ ಅದ್ದೂರಿ ಅಭಿನಂದನಾ ಸಮಾರಂಭ

  • Krishna Shinde
  • 13 Jan 2024 , 4:19 PM
  • Dharwad
  • 214

ಹುಬ್ಬಳ್ಳಿ :ಹೇಮರಡ್ಡಿ ಮಲ್ಲಮ್ಮ 601 ನೇ ಜಯಂತೋತ್ಸವ ಅಂಗವಾಗಿ ರಡ್ಡಿ  ಸಮಾಜದ ನೂತನ ಶಾಸಕರಿಗೆ ಅಭಿನಂದನಾ ಸಮಾರಂಭ ಹುಬ್ಬಳ್ಳಿಯಲ್ಲಿ ಜರುಗಿದೆ.

ಈ ಸಮಾರಂಭದಲ್ಲಿ ರಡ್ಡಿ  ಸಮಾಜದಿಂದ ನೂತನವಾಗಿ ಚುನಾವಣೆಯಲ್ಲಿ ಗೆದ್ದಿರುವ ಎಲ್ಲ ಶಾಸಕರಿಗೆ ಅಭಿನಂದನೆ ಹಾಗು ಸನ್ಮಾನ ಕಾರ್ಯಕ್ರಮ ಜರುಗಿತು.

ಶ್ರೀ ವೇಮನಾನಂದ ಮಹಾಸ್ವಾಮಿಗಳು ರಡ್ಡಿ ಪೀಠ, ಎರೆಹೊಸಹಳ್ಳಿ ಹರಿಹರ ಅವರ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆದಿದ್ದು ,ಎಚ್. ಕೋನರಡ್ಡಿ ಶಾಸಕರು, ನವಲಗುಂದ ವಿಧಾನಸಭಾ ಮತಕ್ಷೇತ್ರ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕರಾದ ಗಾಲಿ  ಜನಾರ್ದನರಡ್ಡಿ ಗಂಗಾವತಿ ವಿಧಾನ ಸಭಾ ಮತಕ್ಷೇತ್ರ, ಜಿ. ಎಸ್. ಪಾಟೀಲ
ರೋಣ ವಿಧಾನ ಸಭಾ ಮತಕ್ಷೇತ್ರ, ಬಸವರಾಜ ರಾಯರಡ್ಡಿ 
ಯಲಬುರ್ಗಾ ವಿಧಾನ ಸಭಾ ಮತಕ್ಷೇತ್ರ,  ಜೆ.ಟಿ. ಪಾಟೀಲ ಬೀಳಗಿ ವಿಧಾನ ಸಭಾ ಮತಕ್ಷೇತ್ರ, ಸಿ.ಎಸ್. ನಾಡಗೌಡ  ಮುದ್ದೇಬಿಹಾಳ ವಿಧಾನ ಸಭಾ ಮತಕ್ಷೇತ್ರ, ಹಂಪನಗೌಡ ಬಾದರ್ಲಿ  ಸಿಂಧನೂರು ವಿಧಾನಸಭಾ ಮತಕ್ಷೇತ್ರ,ಎಸ್. ಆರ್. ವಿಶ್ವನಾಥ ಯಲಹಂಕ ವಿಧಾನ ಸಭಾ ಮತಕ್ಷೇತ್ರ, ಚೆನ್ನಾರಡ್ಡಿ ಪಾಟೀಲ ತುನ್ನೂರು ಯಾದಗಿರಿ ವಿಧಾನ ಸಭಾ ಮತಕ್ಷೇತ್ರ, ಶರಣಗೌಡ ಕಂದಕೂರ ಗುರುಮಿತ್ಕಲ್ ವಿಧಾನಸಭಾ ಮತಕ್ಷೇತ್ರ, ಎಸ್. ಎನ್. ಸುಬ್ಬಾರಡ್ಡಿ ಬಾಗೇಪಲ್ಲಿ ವಿಧಾನಸಭಾ ಮತಕ್ಷೇತ್ರ, ಸತೀಶರಡ್ಡಿ ಬೊಮ್ಮನಹಳ್ಳಿ ವಿಧಾನ ಸಭಾ ಮತಕ್ಷೇತ್ರ, ಪ್ರಕಾಶ ಕೋಳವಾಡ ರಾಣೆಬೆನ್ನೂರು ವಿಧಾನ ಸಭಾ ಮತಕ್ಷೇತ್ರ, ನಾರಾ.ಭರತರಡ್ಡಿ ಬಳ್ಳಾರಿ ನಗರ ವಿಧಾನ ಸಭಾ ಮತಕ್ಷೇತ್ರ, ಶರಣಗೌಡ ಪಾಟೀಲ ಬೈಯ್ಯಾಪೂರ ವಿಧಾನ ಪರಿಷತ್‌ ಸದಸ್ಯರು ರಾಯಚೂರ , ಪಿ. ಎಚ್. ಪೂಜಾರ ವಿಧಾನ ಪರಿಷತ್‌ ಸದಸ್ಯರು ಬಾಗಲಕೋಟ,ಗೋಪಿನಾಥ ರಡ್ಡಿ ವಿಧಾನ ಪರಿಷತ್‌ ಸದಸ್ಯರು ಅವರನ್ನು ಸನ್ಮಾನಿಸಲಾಯಿತು. 

ಹಾಗು 2022-23ನೇ ಸಾಲಿನ  ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ. ಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಗಳಿಸಿದ ರೆಡ್ಡಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ  ಪ್ರತಿಭಾ ಪುರಸ್ಕಾರ ಕೂಡಾ ಈ ಕಾರ್ಯಕ್ರಮದಲ್ಲಿ  ಜರುಗಿದೆ.

Read All News