ಬೆಳಗಾವಿ :ವಕೀಲರ ಪ್ರತಿಭಟನೆ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.
10 ಕಿಲೋಮೀಟರ್ ಸಾಲುಗಟ್ಟಿ ನಿಂತ ಸಾವಿರಾರು ವಾಹನಗಳು. ವಕೀಲರ ಪ್ರತಿಭಟನೆಗೆ ಪ್ರಯಾಣಿಕರು ಹೈರಾಣಾಗಿದ್ದಾರೆ.
ವಕೀಲರ ಪ್ರತಿಭಟನೆಗೆ ಬೇಸತ್ತು ಟ್ರ್ಯಾಕ್ಟರ್ ಸೀಟ್ ಮೇಲೆಯೇ ಮಲಗಿದ ಚಾಲಕ. ಶಾಲಾ ಕಾಲೇಜುಗಳಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು ಗಂಟೆಗಳಿಂದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ಸಂಪೂರ್ಣ ಸ್ಥಗಿತ.ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಸಾವಿರಾರು ವಕೀಲರ ಪ್ರತಿಭಟನೆ ನಡೆಸುತ್ತಿದ್ದಾರೆ.
ಸುವರ್ಣಸೌಧದಿಂದ 500 ಮೀಟರ್ ಅಂತರದಲ್ಲಿ ಧರಣಿ ಕುಳಿತಿರುವ ವಕೀಲರು. ವಕೀಲರು ನಡೆಸುತ್ತಿರುವ ಪ್ರತಿಭಟನೆಯಿಂದ ಬೈಕ್ ಮೇಲೆ ಬಂದ ಸಚಿವ ಮುರುಗೇಶ ನಿರಾಣಿ ಬೈಕ್ ಹಿಂಬದಿ ಕೂತು ಸುವರ್ಣ ಸೌಧದ ಒಳಗೆ ಪ್ರವೇಶ ಮಾಡಿದರು. ೩೦೦೦ ಅಧಿಕ ವಕೀಲರಿಂದ ಸುವರ್ಣ ಸೌಧ ಮುತ್ತಿಗೆ ಸುಮಾರು ೧೦ಕಿಮಿ ವಾಹನ ಸಂಚಾರ ಬಂದ್ ಆಗಿದೆ