ಬೆಳಗಾವಿ: ಸ್ವಾತಂತ್ರ ಭಾರತ ತನ್ನ ಉದಯದ 75ನೇ ವರ್ಷದ ಸಂಭ್ರಮ ಆಚರಣೆಯ ಈ ಸಂದರ್ಭದಲ್ಲಿ ನಾಡಿನ ಜನತೆಗೆ ಶುಭ ಕೋರುತ್ತಾ ಅಮೃತ ಮಹೋತ್ಸವದ ಈ ಅಮೃತಗಳಿಗೆಯನ್ನು ನಾಡಿಗೆ ಸಮರ್ಪಣೆ ಮಾಡೋಣ. ನಾಡಿನಲ್ಲಿ ಮಳೆಯಾಗುತ್ತಿದೆ ನಮ್ಮ ಜಲಾಶಯಗಳೆಲ್ಲ ತುಂಬಿ ನಳನಳಿಸುತ್ತಿವೆ. ಭೂದೇವಿಯ ಒಡಲು ಹಸಿರಿನಿಂದ ಕಂಗೊಳಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ 76ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಧ್ವಜಾರೋಹಣವನ್ನು ನೆರವೇರಿಸಿ, ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದಸಂದೇಶ ನೀಡಿದರು.
ನಮ್ಮ ಸಾಲು ಸಾಲು ಪಶ್ಚಿಮ ಘಟ್ಟಗಳು ಹಸಿರಿನ ತೋರಣದಿಂದ ಅಲಂಕೃತಗೊಂಡಿವೆ ಜಲಾಶಯ ಭರ್ತಿಯಾಗಿ ನಮ್ಮ ನಾಡಿನಲ್ಲಿ ಸಮೃದ್ಧಿಯ ಅಮೃತ ಘಳಿಯ ಆಗಮವನ್ನು ಸಾರುತ್ತಿದೆ. ಪ್ರಧಾನಮಂತ್ರಿ ನರೇದ್ರ ಮೋದಿ ಅವರು “ಹರ್ ಘರ್ ತಿರಂಗಾ” ಕಾರ್ಯಕ್ರಮ ಆಯೋಜಿಸಲು ನೀಡಿದ ಕರೆ ಪ್ರತಿಯೊಬ್ಬ ಭಾರತಿಯ ನಾಗರಿಕನ ಮನ ಮುಟ್ಟುತ್ತಿದೆ. ಸ್ವಾತಂತ್ರದ ಜಾಗೃತಿ ಮೂಡಿಸಿದೆ. ಪ್ರತಿಯೊಬ್ಬ ನಾಗರಿಕ ತಮ್ಮ ಮನೆಯ ಮೇಲೆ ಭಾರತಿಯ ತ್ರಿವರ್ಣ ಧ್ವಜ ಹಾರಿಸುವದು ಸಂತಸ ತಂದಿದೆ ಎಂದು ತಿಳಿಸದರು.
ಈ ಸಂದರ್ಭದಲ್ಲಿ ಸಂಸದ ಮಂಗಳಾ ಅಂಗಡಿ, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಾರುತಿ ಅಷ್ಟಗಿ, ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ ಹೆಚ್.ವಿ, ಜಿಲ್ಲಾ ಪೊಲೀಸ್ ಆಯುಕ್ತರಾದ ಡಾ. ಎಂ.ಬಿ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.