ಬೈಲಹೊಂಗಲ : ನವೆಂಬರ್ ಒಂದು ಕನ್ನಡಿಗರ ಪಾಲಿನ ಹಬ್ಬ, ಈ ಹಬ್ಬ ನೋಡಲು ರಾಜ್ಯದ ಮೂಲೆ, ಮೂಲೆಗಳಿಂದ ಬೆಳಗಾವಿಗೆ ಆಗಮಿಸುವ ಕನ್ನಡಾಭಿಮಾನಿಗಳ ಸ್ವಾಗತಕ್ಕೆ ಚೆನ್ನಮ್ಮ ವೃತ್ತ ಕೈಬೀಸಿ ಕರೆಯುತ್ತಿದೆ.
ವೃತ್ತದ ಸುತ್ತಲಿನ ಸ್ಥಳ ಪರ ಊರಿನ ಅಭಿಮಾನಿಗಳಿಗಾಗಿ ಮೀಸಲಿರಲಿ.. ಎಲ್ಲಿ ನೋಡಿದರೂ ವಾಹನಗಳ ಸಾಲು ಪರ ಊರಿಂದ ಬಂದವರಿಗೆ ಪಾರ್ಕಿಂಗ್ ವ್ಯವಸ್ಥೆ ಚೆನ್ನಾಗಿರಲಿ.. ಹಬ್ಬದ ವಾತಾವರಣ ಸೃಷ್ಟಿಯಾಗುವ ಬೆಳಗಾವಿಯಲ್ಲಿ ಬೇರೆ ಊರಿನವರು ಪರದಾಡುವಂತಾಗಬಾರದು.
ಕುಳಿತುಕೊಳ್ಳಲು ಆಸನ, ಪಾರ್ಕಿಂಗ್ ಮತ್ತು ಮೆರವಣಿಗೆ ವೀಕ್ಷಣೆಗೆ ಅವಕಾಶಗಳು ಇರಲಿ.
ಚೆನ್ನಮ್ಮ ವೃತ್ತದ ಪ್ರತಿಯೊಂದು ಭಾಗದಲ್ಲಿ ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ವ್ಯಕ್ತಿಗಳ, ಕನ್ನಡ ಭಾಷೆ ನಡೆದು ಬಂದ ಹಾದಿ ಮುಂತಾವುಗಳ ಕುರಿತು ಚಿತ್ರಣಗಳನ್ನು ಬಿತ್ತರಿಸುವ ಕಾರ್ಯ ಜಿಲ್ಲಾಡಳಿತದಿಂದ ಆಗಲಿ ಎಂದು ಅಭಿಮಾನಿಗಳ ಆಶಯ.
ವರದಿಗಾರ : ರವಿಕಿರಣ್ ಯಾತಗೇರಿ