ಈಭಾಗದ ಸಮಸ್ಯೆಯ ಕುರಿತು ಅಧವೇಶನದಲ್ಲಿ ಚರ್ಚೆಯಾಗಲಿ : ಸಚಿವ ದಿನೇಶ

  • shivaraj bandigi
  • 15 Jan 2024 , 3:51 AM
  • Belagavi
  • 288

ಬೆಳಗಾವಿ :

ಉತ್ತರ ಕರ್ನಾಟಕ ಭಾಗದಲ್ಲಿ ಅಧಿವೇಶನ ಆಗುತ್ತಿರುವುದರಿಂದ ಇಲ್ಲಿಯ ಬಗ್ಗೆ ಕೇಂದ್ರಿಕೃತವಾಗಿ ಚರ್ಚೆ ಆಗಲಿ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕದ ಸಮಸ್ಯೆಯ ಜೊತೆ ಜೊತೆಗೆ ಕರ್ನಾಟಕ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆ ಆಗಲಿ. ನಮ್ಮ ಸರಕಾರದಲ್ಲಿ ಲೋಪದೋಷಗಳು ಇದ್ದರೆ ಚರ್ಚೆ ಮೂಲಕ ಸರಿ ಮಾಡಿಕೊಳ್ಳುವ ರೀತಿ ಚರ್ಚೆ ಆಗಬೇಕು. ಒಟ್ಟಾರೆ ಅಧಿವೇಶನದಲ್ಲಿ ಒಳ್ಳೆಯ ವಿಚಾರಗಳು ಚರ್ಚೆ ಆಗಲಿ ಎಂದರು.

ಕಾಂಗ್ರೆಸ್‌ಗೆ ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನೆಡೆಯಾಗಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ತೆಲಂಗಾಣದಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ.ಮೂರು ರಾಜ್ಯಗಳಲ್ಲಿ ಹಿನ್ನಡೆ ಆಗಿದೆ ಎಂದರು.

ಪಂಚರಾಜ್ಯ ಫಲಿತಾಂಶ ಲೋಕಸಭೆ ಮೇಲೆ ಪರಿಣಾಮ ಬೀರುತ್ತದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ದೃತಿಗೆಡುವ ಅವಶ್ಯಕತೆ ಇಲ್ಲ. ಪಂಚರಾಜ್ಯ ಪಲಿತಾಂಸ ಲೋಕಸಭೆ ಚುನಾವಣೆ ಮೇಲ ಪರಿಣಾಮ ಬೀರುವುದಿಲ್ಲ. ಪ್ರತಿಯೊಂದು ಚುನಾವಣೆಯಲ್ಲೂ ತನ್ನದೇ ಆದಾ ಪ್ರಭಾವ ಇರುತ್ತೆ. ಹೀಗೆ ಆಗುತ್ತದೆ ಎಂದು ಹೇಳಲು ಬರಲ್ಲ. ಖಂಡಿತವಾಗಿಯೂ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಈ ಕುರಿತು ಕೇಂದ್ರ ನಾಯಕರು ಕೂಡ ಇದರ ಬಗ್ಗೆ ಚರ್ಚೆ ಮಾಡುತ್ತಾರೆ ಎಂದರು.

ಗ್ಯಾರಂಟಿ ಯೋಜನೆ ಒಂದು ಸರಕಾರದ ಕಾರ್ಯಕ್ರಮ. ಚುನಾವಣೆ ಗೆಲ್ಲಲು ಹಲುವು ಅಂಶಗಳು ಕಾರಣವಾಗುತ್ತವೆ

 ಗ್ಯಾರಂಟಿ ಯೋಜನೆಗಳಿಂದ ಚುನಾವಣೆ ಗೆಲುವು ಸೋಲು ನಿರ್ಧಾರ ಮಾಡಕ್ಕೆ ಆಗಲ್ಲ ಎಂದು‌ ತಿಳಿಸಿದರು.

Read All News