ಶಕ್ತಿಯೋಜನೆಯಿಂದ ಸಾರಿಗೆ ನೌಕರರಿಗೆ ನಷ್ಟ : ಕ್ರಮಕ್ಕೆ ಆಗ್ರಹ

  • shivaraj bandigi
  • 14 Jan 2024 , 2:54 AM
  • Belagavi
  • 363

ಬೆಳಗಾವಿ :

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಸಾರಿಗೆ ನೌಕರರ ಚಾಲನಾ ಸಿಬ್ಬಂದಿಗಳ ಮೇಲೆ ದಾಖಲಾದ ಶಿಕ್ಷಾದೇಶವನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಸಂಘ ಗುರುವಾರ ಸುವರ್ಣ ಗಾರ್ಡನ್ ಬಳಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು‌‌.

ಕಳೆದ 2021ರಲ್ಲಿ ನಡೆದ ಸಾರಿಗೆ ಮುಷ್ಕರ ಸಂದರ್ಭದಲ್ಲಿ ವಜಾಗೊಂಡು ಎಂಫ್ಐಆರ್ ಪ್ರಕರಣಗಳಿಂದ ಬಾಕಿ ಇರುವ ನೌಕರರನ್ನು ಯಾವುದೇ ಷರತ್ತು ವಿಧಿಸದೆ ಪುನರ್ ನೇಮಕ ಮಾಡಿಕೊಳ್ಳುವುದು ಹಾಗೂ ಸಾರಿಗೆ ನೌಕರರು, ಅವರ ಕುಟುಂಬದವರ ಮೇಲೆ ದಾಖಲಾಗಿರುವ ಎಲ್ಲ ಪೊಲೀಸ್ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿರುವ ನಾಲ್ಕು ನಿಗಮಗಳ ಸಾರಿಗೆ ನೌಕರರಿಗೆ ಮತ್ತು ಅವರ ಕುಟುಂಬಸ್ಥರಿಗೆ ನಗದು ರಹಿತ ಉತ್ತಮ ವೈದ್ಯಕೀಯ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.

Read All News