ವಾಜಪೇಯಿ ಜನ್ಮದಿನ ವಿಶೇಷವಾಗಿ ಆಚರಿಸಿದ ಮಾ ಭಾರತಿ ಫೌಂಡೇಶನ್

  • Shivaraj
  • 27 Dec 2025 , 11:35 AM
  • Bailhongal
  • 57

ಬೈಲಹೊಂಗಲ- ದೇಶಕಂಡ ಅಪ್ರತಿಮ ನಾಯಕ, ಮಾಜಿ ಪ್ರಧಾನಿ, ಭಾರತ ರತ್ನ ಅಟಲ ಬಿಹಾರಿ ವಾಜಪೇಯಿ ಅವರ ಜಯಂತಿಯನ್ನು ತಾಲೂಕಿನ ಆನಿಗೋಳ ಗ್ರಾಮದ ಬಿಜೆಪಿ ಮುಖಂಡ, ಮಾ ಭಾರತಿ ಫೌಂಡೇಶನ್ ಅಧ್ಯಕ್ಷ ಸುನೀಲ ಮರಕುಂಬಿಯವರು ಬಿಜೆಪಿ ಕಾರ್ಯಕರ್ತರೊಂದಿಗೆ ವಿಶೇಷವಾಗಿ ಆಚರಿಸಿದರು. 

ವಾಜಪೇಯಿ ಅವರ ಜನ್ಮದಿದಂದು ಪ್ರತಿವರ್ಷ ರಕ್ತದಾನ ಶಿಬಿರ ಆಯೋಜನೆ ಮಾಡುವ ಮೂಲಕ ನಿಜವಾದ ದೇಶಭಕ್ತನಿಗೆ ಗೌರವ ಸಲ್ಲಿಸುವ ಕಾರ್ಯ ಮಾಡುತ್ತಿದ್ದಾರೆ.

ಮಾ ಭಾರತಿ ಫೌಂಡೇಶನ್ ವತಿಯಿಂದ ಸುಮಾರು ವರ್ಷಗಳ ಕಾಲದಿಂದ ಈ ಸೇವೆಯನ್ನು ನಡೆಯುತ್ತಿದ್ದು, ಆಪತ್ಕಾಲದಲ್ಲಿ ರಕ್ತದ ಅವಶ್ಯಕತೆ ಇರುವ ಜನರಿಗೆ ನೆರವಾಗುತ್ತಿದ್ದಾರೆ. ಇವರ ಈ ಕಾರ್ಯ ಮಾದರಿಯಾಗಿದ್ದು, ಇವರಿಗೆ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಹಾಗೂ ಅಭಿಮಾನಿ ಬಳಗ ಸಾಥ ನೀಡುತ್ತಿದ್ದು, ಉತ್ಸಾಹಿ ಯುವಕರು, ಅಪ್ಪಟ ದೇಶಭಕ್ತರು ಸ್ವಯಂ ಪ್ರೇರಿತರಾಗಿ ಈ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುತ್ತಿದ್ದಾರೆ. 

ರಕ್ತದಾನ ಮಹಾದಾನವಾಗಿದ್ದು, ಮಾ ಭಾರತಿ ಫೌಂಡೇಶನ್ ಅವರ ಕಾರ್ಯ ಶ್ಲಾಘನೀಯವಾಗಿದೆ.

ಈ ಸಂದರ್ಭದಲ್ಲಿ ನೂರಾರು ಯುವಕರು ರಕ್ತದಾನ ಮಾಡಿ ಶಿಬಿರದ ಯಶಸ್ಸಿಗೆ ಶ್ರಮಿಸಿದ್ದಾರೆಂದು ಸುನೀಲ ಮರಕುಂಬಿ ತಿಳಿಸಿದ್ದಾರೆ.

ವರದಿಗಾರ : ರವಿಕಿರಣ್ ಯಾತಗೇರಿ 

Read All News