ಗಂಗಾವತಿ: ಮಾದಿಗ ಸಮಾಜದ ಹಿರಿಯ
ರಾಜಕಾರಣಿ ಆರ್ ಬಿ ತಿಮ್ಮಾಪುರರಿಗೆ
ಡಿಸಿಎಂ ಸ್ಥಾನ ನೀಡಲು ಕಾಂಗ್ರೆಸ್
ಪಕ್ಷದ ಹೈಕಮಾಂಡ್‍ಗೆ ಮಾದಿಗ
ಸಮಾಜದ ಮುಖಂಡ ಹುಲೇಶ್ ಕೊಜ್ಜಿ ಒತ್ತಾಯಿಸಿದ್ದಾರೆ.
ಮುಧೋಳ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ 1989 ಮತ್ತು 1999ರಲ್ಲಿ ಶಾಸಕರಾಗಿ
2016ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದು ಮತ್ತು 2023 ಮೇ ಹತ್ತ ರಂದು ನಡೆದ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿರುವ ಆರ್.ಬಿ ತಿಮ್ಮಾಪೂರ್ ಅವರನ್ನು ಪರಿಗಣಿಸಿ.
ಕಾಂಗ್ರೆಸ್ ವರಿಷ್ಠರು ಡಿಸಿಎಂ ಸ್ಥಾನ ನೀಡಬೇಕು. ಕಳೆದ ಬಿಜೆಪಿ ಸರಕಾರದಲ್ಲಿ ನಮ್ಮ ಸಮಾಜ ಅಂದರೆ ಮಾದಿಗ ಸಮಾಜದ ಹಿರಿಯ ರಾಜಕಾರಣಿ ಗೋವಿಂದ್ ಕಾರಜೋಳ ಅವರಿಗೆ ಡಿಸಿಎಂ ಸ್ಥಾನ ನೀಡಿದ್ದರು ಅವರನ್ನು ಸೋಲಿಸಿ ಆರ್ ಬಿ ತಿಮ್ಮಾಪೂ ರವರು ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆದಿ
ದ್ದರಿಂದ ರಾಜ್ಯದಲ್ಲಿ 135 ಕಾಂಗ್ರೆಸ್ ಪಕ್ಷದ ಶಾಸಕರು ಇರುವುದರಿಂದ ಕಾಂಗ್ರೆಸ್ ಸರ್ಕಾರ ಆಗುತ್ತದೆ ಹಾಗಾಗಿ ಆರ್ ಬಿ ತಿಮ್ಮಾಪೂರ್
ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು.
ಆರ್.ಬಿ.ತಿಮ್ಮಾಪುರ್ ಈ ಹಿಂದೆ ಸಚಿವರಾಗಿ ಜಿಲ್ಲಾ ಉಸ್ತುವಾರಿಯಾಗಿ ಜವಾಬ್ದಾರಿಯನ್ನು ನಿರ್ವಹಿಸಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ರಾಜ್ಯದಲ್ಲಿ ಜನಸೇವೆಗೆ ಬದ್ಧರಾಗಿ ಪಕ್ಷಸಂಘಟನೆ ಮಾಡಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕರು.
ಮುಧೋಳ ಕ್ಷೇತ್ರದಲ್ಲಿ ಹಲವಾರು ಜನಪರ ಯೋಜನೆಗಳ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆಯಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಡಗೈ ಸಮುದಾಯದ ಹಿರಿಯ ರಾಜಕಾರಣಿ ಆರ್.ಬಿ. ತಿಮ್ಮಾಪುರ್ ಡಿಸಿಎಂ ಸ್ಥಾನ ನೀಡಬೇಕೆಂದು ಕಾಂಗ್ರೆಸ್. ಪಕ್ಷದ ವರಿಷ್ಠರಿಗೆ ಒತ್ತಾಯಿಸಿದ್ದಾರೆ.