ವಿಜೃಂಭಣೆಯಿಂದ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ

  • 14 Jan 2024 , 4:13 PM
  • Belagavi
  • 504

ಅಥಣಿ : ಈ ವರ್ಷದಂತೆ ಈ ವರ್ಷವೂ ಕೂಡ ಹಲ್ಯಾಳ ಗ್ರಾಮ ಪಂಚಾಯಿತಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಫೋಟೋ ಪೂಜೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮುದುಕಣ್ಣ ಶೇಗುಣಿಸುವರು ನೆರವೇರಿಸಿದರು ನಂತರ ವಾಲ್ಮೀಕಿ ಸಮಾಜದ ಅಧ್ಯಕ್ಷರ ಸಮ್ಮುಖದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಆವರಣದ ಹತ್ತಿರ ಇರುವ ಫೋಟೋಗೆ ವಾಲ್ಮೀಕಿ ಸಮಾಜದ ತಾಲೂಕ ಅಧ್ಯಕ್ಷರಾದ ಮಹಾದೇವ ಬಿಸಲನಾಯಿಕ ಅವರು ಫೋಟೋ ಪೂಜೆಯನ್ನು ನೆರವೇರಿಸಿದರು

ವೇಳೆ ಮಾತನಾಡಿದ ಮಹಾದೇವ ಬಿಸಿಲನಾಯಕ್  ಜಗತ್ತಿಗೆ ರಾಮಾಯಣ ಪರಿಚಯಿಸಿದ ಮಹಾಸಂತ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು ಕೋರಿದರು ರಾಜ್ಯ ಸರ್ಕಾರವು ಈಗಾಗಲೇ ಎಸ್ ಸಿ ಸಮಾಜಕ್ಕೆ 17% ಎಸ್ ಟಿ ಸಮುದಾಯಕ್ಕೆ ಮೂರು 3% ಹೆಚ್ಚಿನ ಮೀಸಲಾತಿಯನ್ನು ಘೋಷಿಸಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಇದೇ ವೇಳೆ ಧನ್ಯವಾದ ತಿಳಿಸಿದರು ಹಾಗೂ ಎಲ್ಲ ಸಮಾಜದ ಮುಖಂಡರು ಸದುಪಯೋಗವನ್ನ ಪಡೆದುಕೊಳ್ಳಬೇಕೆಂದರು

ಇದೇ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಮುದುಕಣ್ಣ ಶೇಗುಣಿಸಿ, ಕೆಪಿಎಸ್‌ಸಿ ಸದಸ್ಯರಾದ ಚಿದಾನಂದ ಮುಕಣಿ ವಾಲ್ಮೀಕಿ ಸಮಾಜದ ತಾಲೂಕ ಅಧ್ಯಕ್ಷರಾದ ಮಹಾದೇವ್ ಬಿಸಲನಾಯಕ, ಸಿದ್ದರಾಯ್ ಬಿಸಲನಾಯಕ, ಲಕ್ಷ್ಮಣ್  ಬಿಸಲನಾಯಕ, ಯಲ್ಲಾಲಿಂಗ ನಾಯಿಕ, ರಮೇಶ್ ಸನದಿ, ಆನಂದ ನಾಯಿಕ, ರಾಜು ಮುಲ್ಲಾ, ಸಂತೋಷ ಕಾಂಬಳೆ, ಶಶಿಕಾಂತ್ ದಳವಾಯಿ, ಕುಶಾಲ ಬನಸೋಡೆ, ಹಾಗೂ ಹಲ್ಯಾಳ ಗ್ರಾಮಸ್ಥರು ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಭಾಗವಹಿಸಿದ್ದರು

Read All News