ಬೆಂಗಳೂರು :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದಿಂದ ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ 132 ನೆ ಜನ್ಮ ದಿನಾಚರಣೆ ಸಮಾರಂಭ ಬೆಂಗಳೂರಿನ (ಟೌನ್ ಹಾಲ್) ನಲ್ಲಿ ಜರುಗಿತು .
ಈ ಸಂದರ್ಭದಲ್ಲಿ ಹೋರಾಟಗಾರರು ಸಮಾಜ ಸೇವಕರಿಗೆ / ಸಾಧಕರಿಗೆ ಅಂಬೇಡ್ಕರ ಪ್ರಶಸ್ತಿ ವಿತರಿಸಲಾಯಿತು .
ಬೆಳಗಾವಿಯ ಯುವ ಹೋರಾಟಗಾರ ಸಮಾಜ ಸೇವಕ ನಾಲ್ಕು ಸಂಘಟನೆಯಲ್ಲಿ ಸಕ್ರಿಯವಾಗಿ ನೇತೃತ್ವವಹಿಸಿಕೊಂಡು ಹೋರಾಟದ ಮೂಲಕ ಸಮಾಜ ಸೇವೆ ಮತ್ತು ಸಾಮಾಜಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹೇಶ ಸಿದ್ರಾಯಿ ಶಿಗೀಹಳ್ಳಿಯವರನ್ನು ಗುರುತಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದಿಂದ ಡಾ.ಅಂಬೇಡ್ಕರ ಪ್ರಶಸ್ತಿ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು .