ಬುದ್ಧ ಬಸವ ಹಾಗು ಅಂಬೇಡ್ಕರವರ ತತ್ವಗಳನ್ನು ಎತ್ತಿ ಸಾರುತ್ತಿದೆ ಮಾನವ ಬಂಧುತ್ವ ವೇದಿಕೆ

  • 15 Jan 2024 , 2:11 PM
  • Belagavi
  • 1739

ನಿಪ್ಪಾಣಿ : ಮಾನವ ಬಂಧುತ್ವ ವೇದಿಕೆ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಈ ವೇದಿಕೆಯನ್ನು ಭದ್ರವಾದ ಸೈದ್ಧಾಂತಿಕ ಬುನಾದಿಯ ಮೇಲೆ ನಿರ್ಮಾಣ ಮಾಡಲಾಗಿದೆ. ಸಂವಿಧಾನದ ಮೂಲ ಆಶಯಗಳಾದ ಬಂಧುತ್ವ, ಸಮಾನತೆಯನ್ನು ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ರಾಜಕೀಯ ಶಕ್ತಿಯನ್ನು ತುಂಬಬೇಕಾದ ಸನ್ನಿವೇಶಕ್ಕೆ ಜನರನ್ನು ಸನ್ನದ್ಧಗೊಳಿಸುವುದು ಇದರ ಗುರಿ. ಇದಕ್ಕಾಗಿ ಎಲ್ಲ ಸ್ತರಗಳ ಸಮಾನ ಮನಸ್ಕರು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೆಸೆದು ಜೊತೆಗೂಡಿ ಕೆಲಸ ಮಾಡುವಂತೆ ಪ್ರೇರಣೆ ನೀಡುವುದು  ಆದ್ಯತೆಯಾಗಿದೆ.

ದಿನಾಂಕ 06-11-2022 ರಂದು ಕಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿಯವರ ನೇತೃತ್ವದಲ್ಲಿ ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ನಡೆಯುತ್ತಿರುವ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್ ಮಹಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುದ್ಧ ಬಸವ ಅಂಬೇಡ್ಕರ್  ಅವರ ವಿಚಾರಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರು  ಉರಿಲಿಂಗ ಮಠದ ಶ್ರೀ ಪರಮಪೂಜ್ಯ ಜ್ಞಾನ ಪ್ರಕಾಶ ಸ್ವಾಮಿಜಿ.ಬಸವ ಭವನ ಹೆಬ್ಬಾಳದ ಪರಮಪೂಜ್ಯ ಶ್ರೀ ಬಸವ ಚೇತನ ದೇವರು.
ಮಹಾರಾಷ್ಟ್ರದ ಖ್ಯಾತ ವಾಗ್ಮಿ ಚಿಂತಕರಾದ ಶ್ರೀಮತಿ ಸುಷ್ಮಿತಾ ಅಂದಾರೆ.ಮಹಾರಾಷ್ಟ್ರದ ಕೀರ್ತನಕಾರರಾದ ಪರಮಪೂಜ್ಯ ಶ್ರೀ ಚೈತನ್ಯ ಮಹಾರಾಜರು.

ಯುವ ನಾಯಕ ರಾಹುಲ್ ಜಾರಕಿಹೊಳಿ,ಗೋಕಾಕ ಕಾಂಗ್ರೆಸ್ ಹಿರಿಯ ಮುಖಂಡರಾದ ವಿವೇಕರಾವ ಜತ್ತಿ, ಪಾಂಡು ಮಣಿಕೆರಿ ಹಾಗೂ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಎಸ್‌ ಟಿ ಅಧ್ಯಕ್ಷರಾದ ಬಾಳೇಶ ದಾಸನಟ್ಟಿ ಮತ್ತು ಇನ್ನಿತರ ಕಾರ್ಯಕರ್ತರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

Read All News