ಗುರುಗಳಿಗೆ ಆತ್ಮೀಯವಾಗಿ ನಡೆಯುವುದು ಮತ್ತು ಗುರುಗಳ ತತ್ವ ಆದರ್ಶಗಳನ್ನ ಜೀವನದಲ್ಲಿ ಮೈಗೂಡಿಸಿಕೊಂಡು ನಡೆದರೆ ನಮ್ಮಜೀವನ ಪಾವನವಾಗುತ್ತದೆ ಎಂದು ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಅವರು ಹೇಳಿದರು. ಅಥಣಿ ತಾಲೂಕಿನ ಕಕಮರಿಯ ಶ್ರೀ ಸದ್ಗುರು ಅಭಿನವ ಗುರುಲಿಂಗಜಂಗಮ ಮಹಾಸ್ವಾಮೀಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಜರುಗಿದ ಗುರುವಂದನಾ ಕಾರ್ಯಕ್ರಮದಲ್ಲಿ ಅಥಣಿ ಕಾಂಗ್ರೆಸ್ ಮುಖಂಡರಾದ ಭಾಗವಹಿಸಿ ಶ್ರೀಗಳಿಗೆ ಸತ್ಕರಿಸಿ ಗುರುಗಳನ್ನು ಕೊಂಡಾಡಿದರು.
ಈ ಸಂಧರ್ಭದಲ್ಲಿ ಪಂಚಮಸಾಲಿ ಹರಿಹರ ಪೀಠದ ಹಿಂದಿನ ಜಗದ್ಗುರುಗಳಾದ ನೆಲೋಗಿಯ ಪರಮಪೂಜ್ಯಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಮಾಜಿ ಶಾಸಕರಾದ ಶ್ರೀ ಶಹಜಹಾನ ಡೊಂಗರಗಾವ ಸೇರಿದಂತೆ ಅನೇಕ ಪೂಜ್ಯರು, ಗಣ್ಯರು ಉಪಸ್ಥಿತರಿದ್ದರು.
ವರದಿ : ಅಜೀತ ಕಾಂಬ್ಳೆ ಲೋಕಲವಿವ ನ್ಯೂಸ