ಬೆಳಗಾವಿ :ದುರ್ಗಾದೇವಿ ಬಂಜಾರ ಕ್ಷೇಮಾಭಿವೃದ್ಧಿ ಸಂಘ ವೈಭವ ನಗರ
ಲಂಬಾಣಿ ತಾಂಡಾದ ವತಿಯಿಂದ ಬಂಜಾರಾ ಸಮಾಜದ ಪೇಟಾ ಕಟ್ಟುವ ಕಾರ್ಯಕ್ರಮ ನಡೆಯಲಿದ್ದು ಬಂಜಾರ ಸಮಾಜದ ನಾಯಕನಾಗಿ ಸುರೇಶ ಇರಪ್ಪ ರಾಥೋಡ್ ಹಾಗು ಆನಂದ ಸೋಮಪ್ಪ ಪಮ್ಮಾರ ಕಾರ್ಯಭಾರಿಯಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ದುರ್ಗಾದೇವಿ ಬಂಜಾರ ಕ್ಷೇಮಾಭಿವೃದ್ಧಿ ಸಂಘದವರು ಸ್ವತಹ 5 ಗುಂಟೆ ಜಾಗವನ್ನು ಖರೀದಿಮಾಡಿ ಶ್ರೀ ದುರ್ಗಾದೇವಿ ಮತ್ತು ಸಂತ ಸೇವಾಲಾಲರವರ ಸಾಂಕೇತಿಕ ಮೂರ್ತಿಯನ್ನು ಸ್ಥಾಪನೆಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಹಲುವು ತಾಂಡೆಯ ಜನರು ಪಾಲ್ಗೊಂಡು ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ನೆರೆವರಿಸುವುದಾಗಿ ತಿಳಿಸಿದ್ದಾರೆ.