ಬೆಳಗಾವಿ: ಸಿಎಂ ಅವರು ಅಧಿವೇಶನದಲ್ಲಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದರು ಡಿಸೆಂಬರ್.19 ರಂದು ಪಚಮಸಾಲಿ ಲಿಂಗಾಯತ ಸಮುದಾಯಕ್ಕೆ 2A ಮಿಸಲಾತಿ ಘೋಷಣೆ ವಿಚಾರ ಸರ್ಕಾರ ಮುಖ್ಯವಾಗಿ ಸಿ.ಎಂ. ಬಸವರಾಜ ಬೋಮ್ಮಾಯಿಯವರಿಗೆ ನೆನಪಿಸಲು ನಾಳೆ ಸವದತ್ತಿಯಲ್ಲಿ ಸಮಾವೇಶ ಮಾಡಲಾಗುವುದು ಎಂದು ಪಂಚಮಸಾಲಿ ಬಸವ ಶ್ರೀ ಜಯಮೃತ್ಯುಂಜಯ ಸ್ವಾಮಿಜಿ ಹೇಳಿದರು.
ನಗರದಲ್ಲಿ ಇಂದು ಗೋಷ್ಠಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಸೆಂಬರ್ 22 ರಂದು ಪ್ರತಿಭಟನೆ ಸುವರ್ಣ ಸೌಧದ ಮುಂದೇ ಆಯೋಜಿಸಿದ್ದು, ಮೀಸಲಾತಿ ನೀಡಿದರೆ ಸವದತ್ತಿಯಿಂದ ಪಾದಯಾತ್ರೆ ಮಾಡಿ ಸುವರ್ಣ ಸೌಧದ ಮುಂದೆ ಸಿ.ಎಂ ಅವರಿಗೆ ಸನ್ಮಾನ ಮಾಡುತ್ತೇವೆ ಇಲ್ಲದಿದ್ದರೆ ಮುಂದಿನ ನಿರ್ಧಾರ ಸುವರ್ಣಸೌಧ ಮುತ್ತಿಗೆನೇ ಎಂದರು.