ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ದಿನೇಶ್

  • shivaraj bandigi
  • 14 Jan 2024 , 2:10 PM
  • Belagavi
  • 330

ಬೆಳಗಾವಿ 

ವಿಧಾನಪರಿಷತನಲ್ಲಿ ವಿಪಕ್ಷ ನಾಯಕನ್ನು ಆಯ್ಕೆ ಮಾಡಲು ಆಗಿಲ್ಲ. ಸರಕಾರಕ್ಕೆ ಆರು ತಿಂಗಳು ಕಳೆದರೂ ಸಹ ಅವರಿಂದ ಆಯ್ಕೆ ಮಾಡಲಾಗುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ‌

ಇದು ದುರಂತ. ಸರಕಾರ ಎಲ್ಲವನ್ನು ಸರಿಪಡಿಸಿಕೊಂಡು ಕೆಲಸ ಮಾಡಬೇಕಾಗಿದೆ.ಆದರೆ ವಿಪಕ್ಷಗಳು ಯಾವ ವಿಷಯವನ್ನು ಸರಿಯಾಗಿ ಚರ್ಚೆ ನಡೆಸುತ್ತಿಲ್ಲ‌. ಇದು ದುರಂತ ಎಂದರು.

ಸದನದಲ್ಲಿ ಉ.ಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಾರ ಉತ್ತರ ಕರ್ನಾಟಕದ ಸಮಸ್ಯಗಳ ಕುರಿತಿ ಚರ್ಚೆ ಆಗಬೇಕು. ಕಳೆದ ವಾರದಲ್ಲಿ ಗೊಂದಲ ಸೃಷ್ಟಿಸಿ ಕಾಲಹರಣ ಮಾಡಿದ್ದರು. ಕಲಾಪ ಸರಿಯಾಗಿ ಬಳಸಿಕೊಳ್ಳಲು ಆಗಿಲ್ಲ. ಎರಡು ಸದನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು. ಈ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಉ.ಕ ಅಷ್ಟೇ ಅಲ್ಲದೇ ಸಮಗ್ರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲಿ ಎಂದರು.

Read All News