ಕವಿತಾಳ :ಮಾನ್ವಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಕಾಂಗ್ರೆಸ್ ಪಕ್ಷದ ಧುರೀಣರು, ಮಾಜಿ ಶಾಸಕರು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಎಐಸಿಸಿ ಕಾರ್ಯದರ್ಶಿಗಳು ಅಭಿವೃದ್ಧಿಯ ಚಿಂತಕರಾದ ಎನ್ ಎಸ್ ಬೋಸರಾಜ್ ಅವರಿಗೆ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಕ್ಕಿದ್ದು ಪಟ್ಟಣದ ಕಾಂಗ್ರೆಸ್ ಯುವ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು,
ನಂತರ ಮಾತನಾಡಿದ ಅಯ್ಯಪ್ಪ ತೋಳದ್ ಮಾನ್ವಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹರಿಕಾರರು, ಕಾಂಗ್ರೆಸ್ ಪಕ್ಷದ ಧುರೀಣರು, ಮಾಜಿ ಶಾಸಕರು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಎಐಸಿಸಿ ಕಾರ್ಯದರ್ಶಿಗಳು ಅಭಿವೃದ್ಧಿಯ ಚಿಂತಕರು ನಮ್ಮ ನೆಚ್ಚಿನ ನಾಯಕರಾದ ಎನ್ ಎಸ್ ಬೋಸರಾಜ ಅವರಿಗೆ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಸಿಕ್ಕಿದ್ದು ಮನಸ್ಸಿಗೆ ಮತ್ತು ನಮ್ಮ ರಾಯಚೂರು ಜಿಲ್ಲೆಗೆ ಹೆಚ್ಚಿನ ಅತಿವಾ ಸಂತೋಷದ ಹರ್ಷ ತಂದಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು,
ಮಾತನಾಡಿದ ಜಹಾಂಗೀರ್ ಪಾಷ ವಿಶೇಷವಾಗಿ ನಮ್ಮ ರಾಯಚೂರಿನ ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಿದ್ದು ಬಹಳ ಅನು ಕೂಲಕರವಾಗಿದೆ ಜಿಲ್ಲೆಯ ಮತ್ತು ಎಲ್ಲಾ ತಾಲೂಕಿನ ಅಭಿವೃದ್ಧಿಗಾಗಿ ಹಗಲಿರಳು ಶ್ರಮಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಸಚಿವರಾದ ಎನ್ ಎಸ್ ಬೋಸರಾಜು ಅವರು ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪಟ್ಟಣದ ಕಾಂಗ್ರೆಸ್ ಹಿರಿಯ ಮುಖಂಡರು, ಯುವಕರು ಪಟ್ಟಣ ಪಂಚಾಯತ್ ಸದಸ್ಯರು,ಹಾಲಿ ಸದಸ್ಯರು ಪಟಾಕಿ ಸಿಡಿಸಿ ಸಿಹಿ ಹಂಚಿ ಶುಭ ಹಾರೈಸಿ ಅಭಿನಂದನೆಗಳು ತಿಳಿಸಿದರು.
ಈ ಸಂದರ್ಭದಲ್ಲಿ ಓಬಣ್ಣ, ಮೌನೇಶ್ ಹಿರೇಕುರುಬರು,ಕರಿಯಪ್ಪ ಬಾಗಲವಾಡ ಸಣ್ಣ ಕರಿಯಪ್ಪ ಮಡಿವಾಳ, ಅಂಬರೀಶ್ ಮಡಿವಾಳ,
ನಾಗರಾಜ್ ಸಾಹುಕಾರ, ಪರಶುರಾಮ್ ಕಬಾಡೆ, ಶರಣಪ್ಪ ಡಾಬಾ, ರಮೇಶ್ ಮಡಿವಾಳ, ವೆಂಕಟೇಶ್ ಮಡಿವಾಳ, ಲಿಂಗರಾಜ ಪೂಜಾರಿ, ಸಿದ್ದು ದಿನ್ನಿ, ಪರೀದ್ ಟೈಲರ್, ಜಾವಿದ್ ಟೈಲರ್, ಜಿಯಾ ಟೈಲರ್, ಮುನ್ನ ದಣಿ, ದುರುಗೇಶ ಗುಡಿ, ಮೌನೇಶ ಉಪ್ಪರ್, ಇನ್ನಿತರರು ಉಪಸ್ಥಿತರಿದ್ದರು.