ಕನ್ನಡ ಸಾಹಿತ್ಯ ಪರಿಷತ್ತು ಭವನಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಭೇಟಿ : ವೀಕ್ಷಣೆ

  • Shivaraj Bandigi
  • 15 Jan 2024 , 1:26 PM
  • Koppal
  • 362

ಗಂಗಾವತಿ : ನಗರದ ತಾಲ್ಲೂಕ ಪಂಚಾಯತ್ ಆವರಣದಲ್ಲಿ ಇರುವ ಸಾಹಿತ್ಯ ಪರಿಷತ್ತು ಭವನಕ್ಕೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಭೇಟಿ ನೀಡಿ ಕಟ್ಟಡವನ್ನು ವೀಕ್ಷಣೆ ಮಾಡಿದರು.

ನಗರದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತು ಭವನವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ ಎಂದು ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಶಾಸಕರಿಗೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ  ಬುಧವಾರ ದಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕಟ್ಟಡ ಅವೈಜ್ಞಾನಿಕ ವಾಗಿ ನಿರ್ಮಾಣ ಮಾಡಿರುವುದು ಗಮನಕ್ಕೆ ಬಂತು. ಕಟ್ಟಡದ ಬಾಲ್ಕಾನಿ ಭಾಗದಲ್ಲಿ ಗೋಡೆ ನಿರ್ಮಾಣ ಮಾಡಿ ಮುಚ್ಚಲಾಗಿದೆ. ಅದೇರೀತಿ ಧ್ವನಿ ವ್ಯವಸ್ಥೆ ಕೂಡ ಸರಿಯಾಗಿ ಇಲ್ಲದಿರುವುದು ಸಹ ಕಂಡು ಬಂತು. ಕನ್ನಡ ಸಾಹಿತ್ಯ ಪರಿಷತ್ತ್ ಭವನ ಸಮಸ್ಯೆಯಲ್ಲಿ ಇರುವುದನ್ನು ಶಾಸಕರು ಮನಗಂಡು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸರಿ ಪಡಿಸುವಂತೆ ಸೂಚಿಸಿದರು.

ನಂತರ ಸ್ಥಳದಲ್ಲಿ ಉಪಸ್ಥಿತರಿದ್ದ ಮಾಧ್ಯಮದ ರೊಂದಿಗೆ ಮಾತನಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಕನ್ನಡ ಸಾಹಿತ್ಯ ಪರಿಷತ್ತ ಭವನವನ್ನು ದುರಸ್ತಿ ಗೊಳಿಸಿ, ಬಳಕೆಗೆ ಬರುವಂತೆ ನಿರ್ಮಾಣ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಭವನಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಲಾಗುತ್ತದೆ ಎಂದು ತಿಳಿಸಿದರು.
ಕಟ್ಟಡದಲ್ಲಿ ಧ್ವನಿ ವ್ಯವಸ್ಥೆ ಸರಿ ಇಲ್ಲ ಅದನ್ನು ಸರಿ ಪಡಿಸಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಂದು ನನ್ನ ಜೊತೆಯಲ್ಲಿ ಭೇಟಿ ನೀಡಿದ್ದಾರೆ. ಇದನ್ನು ಸರಿಪಡಿಸಲು ಅವರಿಗೆ ಸೂಚಿಸುತ್ತೇನೆ. ತಕ್ಷಣ ಕಟ್ಟಡ ಬಳಕೆಗೆ ಬರುವ ರೀತಿಯಲ್ಲಿ ದುರಸ್ತಿ ಕಾರ್ಯ ಮಾಡುವಂತೆ ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಶರಣಗೌಡ ಪೊಲೀಸ್ ಪಾಟೀಲ, ತಾಲ್ಲೂಕ ಅಧ್ಯಕ್ಷ
ಶ್ರೀನಿವಾಸ ಅಂಗಡಿ, ಚಂದ್ರಶೇಖರ ಅಕ್ಕಿ.ರಮೇಶ್ ಕುಲಕರ್ಣಿ.ಶಿವಾನಂದ ತಿಮ್ಮಾಪುರ.ಚನ್ಮಬಸವ.ಮಹೇಶ್ ಸಿಂಗನಾಳ.ಶ್ರೀನಿವಾಸ್ ಎಮ್ ಜೆ.ಪಂಪಣ್ಣ ನಾಯಕ.ಸುರೇಶ್ ಕಲಾಪ್ರಿಯ.

ರಮೇಶ್ ಹಾಗೂ ತಾಲ್ಲೂಕು ಪಂಚಾಯತ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read All News