ಅಥಣಿ : ನಗರೋತ್ಥಾನ ಯೋಜನೆಯಡಿ ಇಂದು ಅಥಣಿ ಪಟ್ಟಣದ ಹಲವು ವಾರ್ಡ್ ಗಳಲ್ಲಿ ಸಮಾರು 3 ಕೋಟಿ 60 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಶಾಸಕ ಮಹೇಶ ಕುಮಠಳ್ಳಿ ಇಬ್ಬರೂ ಸೇರಿ ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ವಿಧಾನ ಪರಿಷತ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ ನಗರೋತ್ಥಾನ ಯೋಜನೆಯಡಿ ಈಗಾಗಲೇ ತಾಲೂಕಿಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ನಾನು ಮತ್ತು ಕುಮಠಳ್ಳಿ ಅವರು ಒಟ್ಟಿಗೆ ಕೂಡಿಕೊಂಡು ಅಭಿವೃದ್ದಿಯ ವಿಷಯ ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಗಳನ್ನು ಮಾಡುತ್ತಿದ್ದೇವೆ ಎಲ್ಲ ಕಾಮಗಾರಿಗಳು ಗುಣ ಮಟ್ಟದ್ದಾಗಿರಬೇಕು, ಈ ಬಾರಿ ಚುನಾವಣೆಯಲ್ಲಿ 150 ಸಿಟ್ ಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡು ಪಕ್ಷದಲ್ಲಿ ಎಲ್ಲರೂ ದುಡಿಯುತ್ತಿದ್ದೇವೆ ಮತ್ತೆ ಸರ್ಕಾರ ರಚನೆ ಮಾಡುವದು ಶತಸಿದ್ಧ ಎಂದರು.
ಅನಂತರ ಮಾತನಾಡಿದ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಅಥಣಿ ಪಟ್ಟಣದ ಅಭಿವೃದ್ದಿಗೆ ಇಲ್ಲಿಯರೆಗೆ ವಿವಿದ ಯೋಜನೆಯಡಿ 150 ಕೋಟಿ ರೂ ಅಧಿಕ ಅನುದಾನ ತಂದು ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಪಟ್ಟಣವನ್ನು ಮಾದರಿಯನ್ನಾಗಿಸುವ ಪಣ ತೊಟ್ಟಿದ್ದು ಎಲ್ಲ ಸಾರ್ವಜನಿಕರು ಸಹಕರಿಸಬೇಕು, ಮುಂಬರುವ ದಿನದಲ್ಲಿ ಪಟ್ಟಣದ ಮಸೂಬಾ ಹಳ್ಳವನ್ನು ಅಭಿವೃದ್ದಿ ಪಡಿಸಲು ಯೋಜನೆ ಸಿದ್ದಪಡಿಸಿದ್ದು ಆದಷ್ಟು ಬೇಗ ಅದನ್ನು ಅನುಷ್ಠಾನಗೊಳಿಸುತ್ತೆನೆ ಎಂದರು.
ಪಟ್ಟಣದಲ್ಲಿ ಒಟ್ಟು 27 ವಾರ್ಡಗಳಲ್ಲಿ ಪುರಸಭೆ ಸದಸ್ಯರ ಸಮ್ಮುಖದಲ್ಲಿ ಚಾಲನೆ ನೀಡಿದರು. ಈ ವೇಳೆ ಬಿಜೆಪಿ ಮಂಡಳ ಅದ್ಯಕ್ಷರಾದ ಡಾ.ರವಿ ಸಂಕ,ಮುಖಂಡರಾದ ಚಿದಾನಂದ ಸವದಿ, ನಿಂಗಪ್ಪಾ ನಂದೇಶ್ವರ,ವೆಂಕಟೇಶ ದೇಶಪಾಂಡೆ ಅರ್ಜುನ ಪವಾರ ,ಅಣ್ಣಪ್ಪಾ ಬಜಂತ್ರಿ , ಸಿದ್ದು ಮಾಳಿ , ಶಿವಪ್ರಸನ್ನ ಹೀರೆಮಠ , ಗುತ್ತಿಗೆದಾರರಾದ ಆರ್ ತರಡೆ , ಮಯೂರ ಸಿಂಗೆ, ಆರ್ ಎಚ್ ಬಾರಗೀರ, ಪುರಸಭೆ ಸದಸ್ಯರಾದ ಸಂತೋಷ ಸಾವಡಕರ, ರಾಜು ಗುಡೋಡಗಿ, ಪ್ರಮೋದ ಬಿಳ್ಳೂರ, ಮಲ್ಲು ಬುಟಾಳಿ, ಕಲ್ಲೇಶ ಮಡ್ಡಿ,
ರಮೇಶ ಪವಾರ, ಸೇರಿದಂತೆ ಇತರರಿದ್ದರು.
ವರದಿ :ಅಜೀತ ಕಾಂಬಳೆ ಲೋಕವಿವ ನ್ಯೂಸ ಅಥಣಿ