ಕಾಗವಾಡ: ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಬೇರೆಯವರ ತಟ್ಟೆಯ ನೋನದ ಬಗ್ಗೆ ಮಾತಾಡೋದು ಎಷ್ಟು ಸರಿ ಬಿಜೆಪಿ ನಾಯಕರಿಗೆ ಶಾಸಕ ರಾಜು ಕಾಗೆ ತಿರುಗೇಟು ನೀಡಿದ್ದಾರೆ.
ಮೂಡ ಹಗರಣ ಕುರಿತು ಸಿಎಂ ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಹಮ್ಮಿಕೊಂಡ ಬಿಜೆಪಿ ನಾಯಕರ ವರ್ತನೆ ಸರಿಯಾಗಿಲ್ಲ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸಾಕಷ್ಟು ಆರೋಪ ಸರಮಾಲೆ ಅವರ ಕೊರಳಲ್ಲೆ ಇದೆ. ರಾಜ್ಯದಲ್ಲಿ ನೂರಾರು ಸಮಸ್ಯೆಗಳಿವೆ, ನೆರೆ ಬರ ಸಮಸ್ಯೆ ಬಗ್ಗೆ ಯಾರು ಮಾತನಾಡುತ್ತಿಲ್ಲ .
ನೆರೆ ಹಾವಳಿಯಲ್ಲಿ ಸಾವಿರಾರು ಎಕರೆ ಭೂ ಪ್ರದೇಶದ ಬೆಳೆಗಳು ನಾಶವಾಗಿವೆ.
ಇತ್ತ ಬಸವೇಶ್ವರ ಏತ ನೀರಾವರಿ ಕುರಿತು ಯಾರು ಧ್ವನಿ ಎತ್ತುತ್ತಿಲ್ಲ, ನೀರಾವರಿ ಯೋಜನೆ, ಹೋದ ವರ್ಷದಲ್ಲಿ ಬರ ಅವರಿಸಿತ್ತು ರೈತರ ಸಮಸ್ಯೆ ಕುರಿತು ಯಾರು ಹೋರಾಟ ಮಾಡಲಿಲ್ಲ
ಬಿಜೆಪಿ ಮನೆ ಯೊಂದು ಮೂರು ಬಾಗಿಲು ಎಂಬಂತಾಗಿದೆ. ತಮ್ಮ ಶಾಸಕರ ಮದ್ಯ ಭಿನ್ನಾಭಿಪ್ರಾಯಗಳಿದ್ದು ಬಿಜೆಪಿ ಪಕ್ಷ ನೈತಿಕತೆ ಮರೆತಿದೆ.
ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡಲು ಹೊರಟಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ವರದಿ : ರಾಹುಲ್ ಮಾದರ