ಕಾಣೆಯಾದ ವಿದ್ಯಾರ್ಥಿಯ ಕೊಲೆ

  • 15 Jan 2024 , 4:29 AM
  • Belagavi
  • 354

ಬೆಳಗಾವಿ : ಬೆಳಗಾವಿಯ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಯ ಬರ್ಬರ್ ಹತ್ಯೆ ತಾಲೂಕಿನ ಮುಚ್ಚಂಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ನಿನ್ನೆ ರಾತ್ರಿ ವಿದ್ಯಾರ್ಥಿಯನ್ನ ಕೊಲೆ ಮಾಡಿ ಎಸದಿರುವ ಹಂತಕರು. ಪ್ರಜ್ವಲ್ ಶಿವಾನಂದ ಕರಿಗಾರ ಕೊಲೆಯಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಬೆಳಗಾವಿಯ ಶಿವಾಜಿ‌ ನಗರದ ನಿವಾಸಿ ಪ್ರಜ್ವಲ್ ನಗರದ ಜಿ.ಎ.ಹೈಸ್ಕೂಲ್ ನಲ್ಲಿ ಓದುತ್ತಿದ್ದ.ವಿದ್ಯಾರ್ಥಿಯ ಶಾಲಾ ಸಮವಸ್ತ್ರದಿಂದ ಗುರುತು ಪತ್ತೆಯಾಗಿದೆ.

10 ನೇ ತರಗತಿ ಯಲ್ಲಿ ಓದುತ್ತಿರುವ ವಿದ್ಯಾರ್ಥಿ ಎಂದು ಹೇಳಲಾಗುತ್ತಿದೆ.ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅರೆ ಬೆತ್ತಲೆ ಅವಸ್ಥೆಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ಗಿರೀಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

Read All News