ಉಳಿದ ನಾಲ್ಕು ವಿಮಾನ ನಿಲ್ದಾಣಗಳಿಗೆ ನಾಲ್ವಡಿ ವೆಂಕಟಪ್ಪ ನಾಯಕ ,ಅಂಬೇಡ್ಕರ್ ,ರಾಜ ವೀರ ಮದಕರಿ ನಾಯಕ ಗಂಡುಗಲಿ ಕುಮಾರರಾಮ ವಿಶ್ವ ಗುರು ಬಸವಣ್ಣ ಎಂದು ಹೆಸರಿಡಿ : ಮಹೇಶ ಶಿಗೀಹಳ್ಳಿ ಸರ್ಕಾರಕ್ಕೆ ಮನವಿ

  • krishna shinde
  • 15 Jan 2024 , 2:27 PM
  • Belagavi
  • 719

ಬೆಳಗಾವಿ:ರಾಜ್ಯದ 4 ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರಿಡಲು ಸದನ ಒಪ್ಪಿಗೆ ಸೂಚಿಸಿ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದು ಅಭಿನಂದಿಸುತ್ತೇವೆ ಸ್ವಾಗತಿಸುತ್ತೇವೆ. ಆದರೆ ನಾಲ್ಕು ವಿಮಾನ ನಿಲ್ದಾಣಕ್ಕೆ ಇಡುತ್ತಿರುವ ಮಹನೀಯರ ಹೆಸರುಗಳಲ್ಲಿ ರಾಜ ವೀರ ಮದಕರಿ ನಾಯಕ ಮತ್ತು ನಾಲ್ವಡಿ ವೆಂಕಟಪ್ಪ ನಾಯಕ ಮತ್ತು ಡಾ. ಬಾಬಾ ಸಾಹೇಬ ಅಂಬೇಡ್ಕರ್ , ಗಂಡುಗಲಿ ಕುಮಾರರಾಮ ,ವೀರ ಸಿಂಧೂರ ಲಕ್ಷ್ಮಣ,ವಿಶ್ವ ಗುರು ಬಸವಣ್ಣ,ಈ ಮಹನೀಯರ ಹೆಸರು ಇಲ್ಲದಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಈಗಾಗಲೇ ನಮ್ಮ ರಾಯಣ್ಣ ಚನ್ನಮ್ಮ ರವರ ಹೆಸರು  ರೈಲಿಗೆ ಮತ್ತು  ನಿಲ್ದಾಣಗಳಿಗೆ ಹೆಸರು ಇದ್ದರು ಕೂಡ ಮತ್ತೆ ಉಳಿದ ಸ್ಥಳಗಳಿಗೆ ಮತ್ತೆ ಅದೇ ಮಹನೀಯರ ಹೆಸರು ಇಡುವುದು ಎಷ್ಟು ಸರಿ.

ದೇಶ ರಕ್ಷಣೆಗಾಗಿ ನಾಡು ನುಡಿಗಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ್ದು ಮತ್ತು ಸಂವಿಧಾನ ಕೊಟ್ಟಂತಹ ಅಂಬೇಡ್ಕರ್  ಹಾಗೂ ಇನ್ನೂ ನೂರಾರು ಮಹನೀಯರು ಇದ್ದರೂ ಅವರ ಹೆಸರುಗಳನ್ನು ಸರ್ಕಾರ ಗಮನಕ್ಕೆ ತಗೆದುಕೊಳ್ಳದೆ ಉಳಿದ ಮಹಾನನಾಯಕರಿಗೆ ಅಗೌರವ ತೋರುತ್ತಿರುವುದು ಖಂಡನೀಯ.

ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ಸರ್ಕಾರದ ವಿರುದ್ಧ  ಹೋರಾಟ ಖಂಡಿತ ಎಂದು ಹೇಳಿದ್ದಾರೆ.

Read All News