ತಾಲ್ಲೂಕು ಮಟ್ಟದ ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ನಂದಿನಿ ಸೈಕ್ಲಿಂಗ್ ಸ್ಪರ್ಧೆ

  • 15 Jan 2024 , 12:29 AM
  • Belagavi
  • 116

ಬೆಳಗಾವಿ :ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಕಾರ್ಯಾಚರಣೆಯಲ್ಲಿದ್ದು, ಸೈಕ್ಲಿಂಗ್ ಪಟುಗಳಿಗೆ ತರಬೇತಿ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದೆ.ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷರಾದ ವಿವೇಕ.ವ.ಪಾಟೀಲ ರವರ ತಂದೆಯವರಾದ ದಿ| ವಿ.ಎಲ್.ಪಾಟೀಲ ರವರು ಅಸೋಸಿಯೇಷನ್‌ ಸಂಸ್ಥಾಪಕರಾಗಿರುತ್ತಾರೆ. 

ಇದರಲ್ಲಿ 15 ಸೈಕ್ಲಿಸ್ಟ್ ಸದಸ್ಯರಾಗಿರುತ್ತಾರೆ ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸೈಕ್ಲಿಂಗ್‌ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಜಿಲ್ಲೆಯ ಸೈಕ್ಲಿಂಗ್ ಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಆಸಕ್ತ ಸೈಕ್ಲಿಸ್‌ಗಳಿಗೆ ತರಬೇತಿ ನೀಡಲು ಅಸೋಸಿಯೇಷನ್‌ದವರು ಮುಂದೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ. 

ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಜಿಲ್ಲೆಯ 15 ಶೈಕ್ಷಣಿಕ ತಾಲ್ಲೂಕುಗಳ ಪ್ರೌಢಶಾಲೆಗಳ 8ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಗಳಿಗೆ ತರಬೇತಿ ನೀಡಲು ಯೋಜಿಸಿದೆ. 

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದವರು, ಬೆಳಗಾವಿ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ಬೆಳಗಾವಿ, ಇವರ ಸಹಯೋಗದೊಂದಿಗೆ ಅಭ್ಯರ್ಥಿಗಳ ಆಯ್ಕೆಗೆ ಸಹಕರಿಸಲು ಮುಂದೆ ಎಂದು ತಿಳಿಸಿದ್ದಾರೆ. 

ತತ್ಸಂಬಂಧ ತಾಲ್ಲೂಕುಮಟ್ಟದ ಪ್ರೌಡಶಾಲೆಗಳಿಂದ ಒಟ್ಟು 75 ವಿದ್ಯರ್ಥಿಗಳನ್ನು ಆಯ್ಕೆ ಮಾಡಿ (50 ಗಂಡು ಮಕ್ಕಳು, 25 ಹೆಣ್ಣುಮಕ್ಕಳು) ಸ್ಪರ್ಧೆ ಏರ್ಪಡಿಸಿ, ಪ್ರತಿ ತಾಲ್ಲೂಕಿನಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. 

ಇದರಿಂದಾಗಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಸಹಕಾರಿ ಆಗುವುದು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಇವರುಗಳಿಗೆ ಸ್ಪರ್ಧಿಸಲು ನೆರವಾಗುವಂತೆ ತರಬೇತಿ ನೀಡುವುದಾಗಿ ಶ್ರೀ ಅನಿಲ ಪೋತದಾರ ಅಸೋಸಿಯೇಷನ್‌ ಅಧ್ಯಕ್ಷರು ತಿಳಿಸಿದ್ದಾರೆ .

Read All News