ಬೆಂಗಳೂರು :ರಾಷ್ಟ್ರೀಯ ಶಿಕ್ಷಣ ನೀತಿ-2023 ಕುರಿತು ಅನೇಕ ವಿಷಯಗಳನ್ನು ಹಂಚಿ ಕೊಂಡಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಯುವಘಟಕದ ರಾಜ್ಯಾಧ್ಯಕ್ಷರಾಗಿರುವ ಭೀಮಾಶಂಕರ್ ಪಾಟೀಲ್ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೩ ಪ್ರಾದೇಶಿಕತೆಯನ್ನೊಳಗೊಂಡ ಸ್ಥಳಿಯ ಕಲೆ,ಸಾಹಿತ್ಯ,ಸಂಸ್ಕ್ರತಿ,ಇತಿಹಾಸ ಗಳಿಂದ ಸಂಪದ್ಭರಿತವಾಗಿರಬೇಕು ಎಂದು ಹೇಳಿದ್ದಾರೆ.
ಇಂತಹ ಅನೇಕ ಅಂಶಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ ೨೦೨೩ ಒಳಗೊಳ್ಳಬೇಕು ಎಂದು ನಾವು ಆಗ್ರಹಿಸುತ್ತಿವೆ ಎಂದು ಒತ್ತಿ ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರ ಭಾರತದ ಪ್ರಾದೇಶಿಕತೆಯ ಭಾವವನ್ನು ಗೌರವಿಸಬೇಕು.ದೇಶ ಸ್ವಾತಂತ್ರ್ಯ ಬಂದು ೭೫ವಷ೯ ಕೆಳೆದರೂ ಕನಾ೯ಟಕದ ಇತಿಹಾಸ ಉತ್ತರ ಭಾರತಕ್ಕೆ ಗೋತ್ತೇ ಇಲ್ಲ ಈ ತಾರತಮ್ಯ ಹೋಗಲಾಡಿಸುವ ಕೆಲಸ ಮೊದಲು ಆಗಬೇಕಿದೆ ಎಂದು ಭೀಮಾಶಂಕರ ಪಾಟೀಲ್ ಹೇಳಿದ್ದಾರೆ.
ಕನಾ೯ಟಕದಲ್ಲಿ ವಾಸಿಸುತ್ತಿರುವ ದೇಶ ಬಂಧುಗಳು ಈ ಬೇಡಿಕೆಗಳನ್ನು ವಿರೋಧ ಎನ್ನುವ ಬದಲು ಕನ್ನಡಿಗರ ಹಕ್ಕೋತ್ತಾಯ ಎಂದುಕೊಂಡು ನಮ್ಮ ಧ್ವನಿಗೆ ಧ್ವನಿಯಾಗಿ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ,ನಾವು ಭಾರತವನ್ನು ಪ್ರೀತಿಸುತ್ತೇವೆ ನೀವು ಕನಾ೯ಟಕದ ಪ್ರಾದೇಶಿಕ ಚಿಂತನೆಗಳನ್ನು ಪ್ರೀತಿಸಿ,ಪೂಜಿಸಿ,ಗೌರವಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.